Advertisement

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

12:00 AM Jul 01, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ(Suraj Revanna)ಗೆ ಸಿಐಡಿ(CID) ಅಧಿಕಾರಿಗಳು ಡ್ರಿಲ್‌ ಮಾಡಿ ಅವರ ವಿರುದ್ಧದ ಆರೋಪದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಕೆಲವೊಂದು ಸಾಕ್ಷ್ಯ ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೆ ಸೂರಜ್‌(Suraj Revanna) ಚಿಂತೆಗೀಡಾಗಿದ್ದಾರೆ. ಇತ್ತ ಸಿಐಡಿ ಅಧಿಕಾರಿಗಳು ಸೂರಜ್‌ರಿಂದ ಸತ್ಯ ಬಾಯ್ಬಿಡಿಸಿ ಹೇಳಿಕೆ ದಾಖಲಿಸಿಕೊಳ್ಳಲು ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಆದರೆ ಸೂರಜ್‌ ಮತ್ತೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆನ್ನಲಾಗಿದೆ.

ಈಗಾಗಲೇ ನಡೆಸಿರುವ ಸೂರಜ್‌ ವೈದ್ಯಕೀಯ ಪರೀಕ್ಷೆಯ ವರದಿ ಶೀಘ್ರದಲ್ಲೇ ಸಿಐಡಿ ಕೈ ಸೇರಲಿದ್ದು, ಪ್ರಕರಣದಲ್ಲಿ ಇದು ಮಹತ್ವದ ಸಾಕ್ಷ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಕಸ್ಟಡಿ ಅಂತ್ಯ
ವ್ಯಕ್ತಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸಿಐಡಿ ಅಧಿಕಾರಿಗಳು ಎಂಎಲ್‌ಸಿ ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದ ಅವಧಿ ಸೋಮವಾರ (ಜು. 1) ಅಂತ್ಯ ಗೊಳ್ಳಲಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಅಶ್ಲೀಲ ಪೆನ್‌ಡ್ರೈವ್‌ ಕೇಸ್‌ನಲ್ಲಿ ಸಿಲುಕಿ ಕೊಂಡಿರುವ ಸೂರಜ್‌ ಸಹೋದರ ಪ್ರಜ್ವಲ್‌ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next