ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಗೊಂಡಿರುವ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಬಾಕಿ ಉಳಿದ ವಿಷಯಗಳ ಮೌಲ್ಯಮಾಪನ ಮಾಡುವ ಕ್ರಮವನ್ನು ಸಿಐಎಸ್‌ಸಿಇ ಶುಕ್ರವಾರ ಪ್ರಕಟಿಸಿದೆ.
ಮೂರು ಮಾನದಂಡಗಳಲ್ಲಿ ಮೌಲ್ಯಮಾಪನ ಕ್ರೀಯೆ ನಡೆಸಲಾಗುವುದು ಎಂದು ತಿಳಿಸಿದೆ.
ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಹಾಜರಾದ ವಿಷಯಗಳ ಪೈಕಿ ಅತಿ ಹೆಚ್ಚು ಅಂಕ ಗಳಿಸಿದ ಮೂರು ವಿಷಯಗಳಲ್ಲಿನ ಸರಾಸರಿ ತೆಗೆದು, ಅದರ ಆಧಾರದ ಮೇಲೆ ಪರೀಕ್ಷೆ ರದ್ದಾದ ವಿಷಯಗಳ ಅಂಕ ನಿರ್ಧರಿಸಲಾಗುವುದು.
ಇನ್ನು, ಪ್ರಾಜೆಕ್ಟ್ ಹಾಗೂ ಪ್ರ್ಯಾಕ್ಟಿಕಲ್ ವರ್ಕ್‌ಗಳೆರಡೂ ಇರುವ ವಿಷಯಗಳ ಮೌಲ್ಯಮಾಪನದ ವೇಳೆ, ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಒಟ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು, ಅದರ ಸರಾಸರಿ ಅಂಕಗಳ ಆಧಾರದ ಮೇಲೆ ಅಂಕ ನೀಡಲಾಗುವುದು.
ಅದೇ ರೀತಿ, ಪ್ರ್ಯಾಕ್ಟಿಕಲ್ ವರ್ಕ್‌ಗೆ ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಒಟ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು, ಅದರ ಸರಾಸರಿ ಆಧಾರದ ಮೇಲೆ ಅಂಕ ನೀಡಲಾಗುವುದು ಎಂದು ತಿಳಿಸಿದೆ.