Advertisement
ಕನಿಷ್ಠ ಅಂತರಈ ರಸ್ತೆ ಮೂಲಕ ಅಳಿವೆಬಾಗಿಲಿಗೆ 2 ಕಿಮೀ., ಎಂ. ಕೋಡಿಗೆ 5 ಕಿಮೀ., ಕೋಟೇಶ್ವರಕ್ಕೆ 8 ಕಿಮೀ. ದೂರದಲ್ಲಿ ತಲುಪಬಹುದು. ರಿಕ್ಷಾಗಳು, ದ್ವಿಚಕ್ರವಾಹನಗಳಷ್ಟೇ ಅಲ್ಲ ಬಹುತೇಕ ಎಲ್ಲ ಬಗೆಯ ವಾಹನಗಳೂ ಈ ರಸ್ತೆ ಮೂಲಕ ಓಡಾಟ ನಡೆಸುತ್ತವೆ. ಕೋಡಿ ಭಾಗದ ಅದೆಷ್ಟೋ ಜನರಿಗೆ ಕುಂದಾಪುರ ಪೇಟೆಗೆ ಬರಲು ಈ ರಸ್ತೆಯೇ ಅನುಕೂಲ.
ಸೇತುವೆಯೂ ಇದೆ
ಪುರಸಭೆ ಹಾಗೂ ಕೋಡಿ ಮಧ್ಯೆ ಹೊಳೆಯೊಂದು ಹಾದು ಹೋಗುತ್ತದೆ. ಈ ಹೊಳೆಗೆ ಸೇತುವೆ ಇಲ್ಲದ ಕಾರಣ ಸಂಪರ್ಕ ಕಷ್ಟ ಎಂಬ ಬೇಡಿಕೆ ಇತ್ತು. ಅದಕ್ಕಾಗಿಯೇ ದೊಡ್ಡ ಸೇತುವೆ ಕೂಡ ನಿರ್ಮಾಣವಾಗಿದೆ. ಆದರೆ ಈಗ ಸೇತುವೆ ಇದ್ದರೂ ರಸ್ತೆ ಮೂಲಕ ವಾಹನಗಳ ಓಡಾಟ ಕಷ್ಟವಾದ ಕಾರಣ ಸೇತುವೆಯೂ ಉಪಯೋಗವಿಲ್ಲದಂತಾಗಲಿದೆ ಎಂಬ ಆತಂಕ ಇದೆ.
ಸಂಗಮ್‌ನಿಂದ ರಿಂಗ್‌ರೋಡ್ ಮೂಲಕ ಇಲ್ಲಿಗೆ ಸಂಪರ್ಕ ಇದೆ. ಈ ರಸ್ತೆಯನ್ನು ಸುಧಾರಿಸಿದರೆ ಪೇಟೆಯಲ್ಲಿ, ಚರ್ಚ್ ರೋಡ್‌ನಲ್ಲಿ ಕೋಡುಗೆ ಬರುವ ವಾಹನಗಳ ಟ್ರಾಫಿಕ್ ಕಡಿಮೆಯಾಗಲಿದೆ. ಚರ್ಚ್‌ರೋಡ್‌ನಲ್ಲಿ ಆಸ್ಪತ್ರೆಗಳು, ಶಾಲೆ ಇತ್ಯಾದಿಗಳು ಇರುವ ಕಾರಣ ವಾಹನಗಳ ಓಡಾಟ ತುಸು ಹೆಚ್ಚೇ ಇರುತ್ತದೆ. ಆದರೆ ವರ್ತುಲ ರಸ್ತೆ ನಿರ್ಮಿಸಿದರೆ ಈ ಎಲ್ಲ ಒತ್ತಡಗಳನ್ನು ನಿವಾರಿಸಬಹುದು. 80 ಲಕ್ಷ ರೂ. ಮಂಜೂರು
ಸಣ್ಣ ಸೇತುವೆಯಿಂದ ದೊಡ್ಡ ಸೇತುವೆವರೆಗೆ ಸುಮಾರು 500 ಮೀ.ನಷ್ಟು ದೂರ ಇರುವ ಈ ರಸ್ತೆಯ ದುರಸ್ತಿ ಹಾಗೂ ತೋಡಿಗೆ ತಡೆಗೋಡೆ ಕಟ್ಟಲು 80 ಲಕ್ಷ ರೂ. ಮಂಜೂರಾಗಿದೆ. ಅದಕ್ಕಾಗಿ ಜಲ್ಲಿ, ಪೈಪ್ ತಂದು ರಾಶಿ ಹಾಕಲಾಗಿದೆ. ಹೊಳೆಯ ಹೂಳೆತ್ತಿ ಮಣ್ಣನ್ನು ಅಲ್ಲೇ ರಾಶಿ ಹಾಕಲಾಗಿದೆ. ಆದರೆ ತಂದು ಹಾಕಿದ ಮೇಲೆ ಚುನಾವಣೆ ಬಂತು ಎಂದು, ಅನಂತರ ಮಳೆ ಬಂತು ಎಂದು ಕಾಮಗಾರಿ ನಡೆಯಲಿಲ್ಲ. ಹೂಳೆತ್ತಿ ಅಲ್ಲೇ ಸುರಿದ ಮಣ್ಣು ಕರಗಿ ರಸ್ತೆಯೆಲ್ಲ ರಾಡಿಯಾಗಿದೆ. ಅದನ್ನು ತೆರವು ಮಾಡಿ ಜನರಿಗಾಗುವ ತೊಂದರೆ ನಿವಾರಣೆ ಕುರಿತು ಗಮನ ಹರಿಸಬೇಕಿದೆ. ಚುನಾವಣೆ ಬಂದರೂ ಟೆಂಡರ್ ಆದ ಕಾಮಗಾರಿ ನಡೆಸಲು ಯಾವುದೇ ತೊಂದರೆ ಇರುವುದಿಲ್ಲ.
Related Articles
ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡಗಳಿವೆ. ಕೆಸರ ನೀರ ಸಂಗ್ರಹವಿದೆ. ಆದ್ದರಿಂದ ಎಲ್ಲಿ ರಸ್ತೆ ಇದೆ, ಎಲ್ಲಿ ಹೊಂಡ ಇದೆ ಎಂದು ತಿಳಿಯುವುದಿಲ್ಲ. ಆದ್ದರಿಂದ ರಿಕ್ಷಾದವರು ಈ ರಸ್ತೆ ಮೂಲಕ ಬರಲು ಒಪ್ಪುತ್ತಿಲ್ಲ. ಬದಲಿ ರಸ್ತೆಯಲ್ಲಿ ಸಾಗಿದರೆ ಬಾಡಿಗೆ ಅಧಿಕವಾಗುತ್ತದೆ. ಇತರ ವಾಹನಗಳ ಸವಾರರಿಗೂ, ವಾಹನಗಳು ಓಡಾಡಿದರೆ ಜನರಿಗೆ ನಡೆದಾಡಲೂ ಕೆಸರ ಸೇಚನವಾಗು¤ದೆ.
Advertisement
ಓಡಾಡುವಂತಾಗಲಿಹದಗೆಟ್ಟ ರಸ್ತೆ ಒಂದಷ್ಟಾದರೂ ದುರಸ್ತಿಯಾಗಿ ಮಳೆಗಾಲದ ಅವಧಿಯಲ್ಲಾದರೂ ಜನರಿಗೂ ವಾಹನದವರಿಗೂ ಓಡಾಡುವಂತಾಗಲಿ.
– ಶ್ರೀಕಾಂತ್,ಸ್ಥಳೀಯರು ಗಮನಕ್ಕೆ ತರಲಾಗಿದೆ
80 ಲಕ್ಷ ರೂ. ಅನುದಾನ ಮಂಜೂರಾಗಿ ಟೆಂಡರ್ ಆಗಿದ್ದರೂ ಕಾಮಗಾರಿ ನಡೆದಿಲ್ಲ. ಆದ್ದರಿಂದ ಇದನ್ನು ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರ ಕ್ರಮವಹಿಸುವ ಭರವಸೆ ನೀಡಿದ್ದಾರೆ.
– ವಿಜಯ್ ಎಸ್. ಪೂಜಾರಿ,ಸದಸ್ಯರು, ಪುರಸಭೆ – ಲಕ್ಷ್ಮೀ ಮಚ್ಚಿನ