Advertisement
ಇಲ್ಲಿನ ಡಾ.ರಾಜ್ ಭಾನಂಗಳದಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ 150 ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಸೂರ್ಯಚಂದ್ರರಿರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ನಿಮ್ಮ ಸಚಿವ ಸಂಪುಟದ ಮೇಲೆ ಸುಮಾರು 71 ಕೇಸ್‌ಗಳು ಇದೆ. ಇವುಗಳಿಗೆಲ್ಲ ಎಫ್ಐಆರ್ ಹಾಕದೆ ಕ್ಲೀನ್ ಚೀಟ್ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ, ಹಣ ಹಾಗೂ ತೋಳ್ಬಲದ ಮೇಲೆ ಮತ್ತೆ ಅಧಿಕಾರ ಹಿಡಿಯುವ ಹುನ್ನಾರದಲ್ಲಿದ್ದಾರೆ. ಅವರ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಕೊಲೆ ಸುಲಿಗೆ ಅಧಿಕಾರಿಗಳ ಮೇಲೆ ದೌರ್ಜನ್ಯ ದಬ್ಟಾಳಿಕೆಗಳು ಹೆಚ್ಚಾಗಿವೆ. ಬೊಕ್ಕಸವನ್ನು ಲೂಟಿ ಮಾಡಲಾಗಿದೆ ಎಂದು ಕಿಡಿಕಾರಿದರು.
ಕಾರ್ಖಾನೆ ಮಾಲಿಕರೊಂದಿಗೆ ಶಾಮೀಲ್: ರಾಜ್ಯದಲ್ಲಿ ಎಲ್ಲಾಕಡೆ ಕುಡಿಯುವ ನೀರಿಗೆ ಹಾಹಾಕಾರ ಇದೆ ಎಂದ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಕಬ್ಬಿಗೆ ವೈಜಾnನಿಕ ಬೆಲೆ ನೀಡದೆ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದರು. ಸಿದ್ದರಾಮಯ್ಯ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ 5ರಿಂದ 6 ಗಂಟೆ ಮಾತ್ರ ವಿದ್ಯುತ್ ಕೊಡುತ್ತಿದ್ದಾರೆ ಎಂದ ಅವರು ಬಿಜೆಪಿ ಸರ್ಕಾರ ಬಂದ ನಂತರ ರೈತರಿಗೆ 12 ಗಂಟೆ ವಿದ್ಯುತ್ ಪೂರೈಸುವ ಭರವಸೆ ನೀಡಿದರು.
ಬಿಜೆಪಿ ಬೆಂಬಲಕ್ಕೆ ಮನವಿ: ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೆ.ಆರ್.ನಗರದಲ್ಲಿ ಬೇರೆ ಪಕ್ಷದ ಶಾಸಕರಿದ್ದರೂ ಯಾವುದೇ ಭೇದ ಮಾಡದೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯಡಿಯೂರಪ್ಪನವರು ಸಾಕಷ್ಟು ಹಣ ಬಿಡುಗಡೆ ಮಾಡಿದ್ದರು ಎಂದು ಸ್ಮರಿಸಿದ ಅವರು, ಈ ಸಾರಿ ಬಿಜೆಪಿ ಅಭ್ಯ ರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಸುರೇಶ್ ಕುಮಾರ್, ಮಾಜಿ ಶಾಸಕ ಬಿ.ಜೆ.ಪುಟ್ಟಸ್ವಾಮಿ, ಕೋಟೆ ಶಿವಣ್ಣ, ಸಿ.ಪಿ.ಯೋಗೇಶ್ವರ್, ತೋಂಟದಾರ್ಯ, ಹೊಸಹಳ್ಳಿ ವೆಂಕಟೇಶ್ ಮಾತನಾಡಿದರು. ಸಬೆಯಲ್ಲಿ ಮುಖಂಡರಾದ ತೇಜಸ್ವಿನಿ ರಮೇಶ್, ಡಿ.ಎಸ್.ವೀರಯ್ಯ, ಅಪ್ಪಣ್ಣ, ಕೌಟಿಲ್ಯ ರಘು, ಹೇಮಂತ್ ಕುಮಾರ್, ತಾ.ಬಿಜೆಪಿ ಅಧ್ಯಕ್ಷ ಶಿವಕುಮಾರ್, ಎಚ್.ಪಿ.ಗೋಪಾಲ್, ಪ್ರಭಾಕರ್ ಜೈನ್ , ಸಿ.ವಿ.ಗುಡಿ ಜಗದೀಶ್, ಬೇಕರಿ ಉಮೇಶ್, ಮಲ್ಲಿಕಾರ್ಜನ್, ಸಾ.ರಾ.ರಮೇಶ್ ಮೊದಲಾದವರು ಇದ್ದರು.