Advertisement
ಸಿಒಪಿಡಿ ಕಾರಣಗಳೇನು?ಧೂಮಪಾನ ಪ್ರಬಲ ಕಾರಣ. ಸಿಗರೆಟ್, ಪೈಪ್ ಸೇದುವವರಿಗೆ ಸಿಒಪಿಡಿ ಬರುವ ಸಾಧ್ಯತೆ ಹೆಚ್ಚು. ಧೂಮಪಾನದ ಹೊಗೆ ಹತ್ತಿರದಿಂದ ಸೇವಿಸುತ್ತಿದ್ದವರಿಗೂ ಇದು ಬರಬಹುದು. ಅದಷ್ಟೇ ಅಲ್ಲ, ಒಲೆಯ ಹೊಗೆ, ಕಲ್ಲಿದ್ದಲು ಹೊಗೆ, ಆಭರಣಗಳ ತಯಾರಿಕೆ ವೇಳೆ ಉಂಟಾಗುವ ಹೊಗೆ ಅಥವಾ ಹೊಗೆಯಾಡು ಪ್ರದೇಶದಲ್ಲಿ ಜೀವನ ನಡೆಸುವುದು ಸಿಒಪಿಡಿಗೆ ಕಾರಣವಾಗಬಹುದು. ವಾಯುಮಾಲಿನ್ಯ, ರಾಸಾಯನಿಕಗಳು, ಗಣಿಗಾರಿಕೆ, ಟೆಕ್ಟ್ಟೈಲ್ಸ್, ಸಿಮೆಂಟ್, ವಾಹನ ದಟ್ಟನೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವುದರಿಂದಲೂ ಕಾಯಿಲೆ ಬರಬಹುದು. ದೀರ್ಘಕಾಲದ ಅಸ್ತಮಾ ಸಮಸ್ಯೆಯಿದ್ದು, ಚಿಕಿತ್ಸೆ ಪಡೆಯದಿದ್ದಾಗ, ವಂಶಪಾರಂಪರಿಕ ಅಂಶಗಳೂ ಕಾಯಿಲೆಗೆ ಕಾರಣವಾಗುತ್ತದೆ.
ಸಿಒಪಿಡಿ ಪ್ರಾರಂಭದಲ್ಲಿ ಆರೋಗ್ಯ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಕ್ರಮೇಣ ಗಂಭೀರ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ 40 ವರ್ಷ ಮೆಲ್ಪಟ್ಟವರಲ್ಲಿ (ಧೂಮಪಾನಿಗಳಲ್ಲಿ 40 ವರ್ಷ ಒಳಗೂ) ಸಿಒಪಿಡಿ ಕಂಡುಬರುತ್ತವೆ. ಸಿಒಪಿಡಿ ಹಂತ ತಿಳಿದುಕೊಳ್ಳಲು ಸ್ಪೈರೋಮೀಟರ್ ಎಂಬ ಯಂತ್ರದ ಸಹಾಯದಿಂದ ಶ್ವಾಸಕೋಶ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಇದರ ಆಧಾರದಲ್ಲಿ ಸೌಮ್ಯ, ಮಧ್ಯಮ, ಗಂಭೀರ, ಅತಿ ತೀವ್ರ ಎಂದು ಕಾಯಿಲೆ ಹಂತ ಅರಿತು ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುತ್ತದೆ. ಸೌಮ್ಯ ಸಿಒಪಿಡಿ
ತುಂಬಾ ಕೆಮ್ಮು ಬರಬಹುದು. ಕೆಲವೊಮ್ಮೆ ಕಫ ಹೊರಬರುತ್ತದೆ. ಶ್ರಮದ ದುಡಿಮೆ ಅಥವಾ ವೇಗದ ನಡಿಗೆಯಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತದೆ. ಈ ವೇಳೆ ಮನೆಯಲ್ಲಿದ್ದೇ ಆರೋಗ್ಯ ಸುಧಾರಣೆಮಾಡಿಕೊಳ್ಳಬಹುದು.
Related Articles
ಹೆಚ್ಚು ಕೆಮ್ಮು, ಕೆಮ್ಮಿನೊಂದಿಗೆ ಕಫ, ಉಸಿರಾಟಕ್ಕೆ ತೊಂದರೆ. ಶ್ವಾಸಕೋಶದ ಸೋಂಕಿನಿಂದ ಗುಣಮುಖರಾಗಲು ಹಲವು ವಾರಗಳು ಬೇಕಾಗುತ್ತವೆ. ಈ ಹಂತದಲ್ಲಿ ರೋಗಿಗೆ ತುರ್ತು ಚಿಕಿತ್ಸೆ, ಅಥವಾ ಹೊರರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
Advertisement
ಗಂಭೀರ ಸಿಒಪಿಡಿಇದು ರೋಗದ ಮೂರನೇ ಹಂತ. ಇಲ್ಲಿ ಕೆಮ್ಮು ಅಧಿಕ, ತುಂಬಾ ಕಫ ಹೊರಬರುತ್ತದೆ. ಶ್ವಾಸಕೋಶ ಸೋಂಕುಗಳಿಂದ ಗುಣವಾಗಲು ಹಲವು ವಾರಗಳು ಬೇಕಾಗಬಹುದು. ಕೋಣೆ ಒಳಗೆ ಓಡಾಡುವುದೂ ಕಷ್ಟ. ಈ ಹಂತದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದು ಚಿಕಿತ್ಸೆ ಪಡೆಯಬೇಕಾಗುತ್ತದೆ. ಅತಿ ತೀವ್ರ ಸಿಒಪಿಡಿ
ಈ ಹಂತದಲ್ಲಿ ರೋಗವು ತೀವ್ರವಾಗು ಉಲ್ಬಣಗೊಂಡು ರೋಗಿ ತನ್ನನ್ನು ತಾನೇ ನಿರ್ವಸಲು ಕಷ್ಟವಾಗುತ್ತದೆ. ಈ ಹಂತದಲ್ಲಿ ರೋಗಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಬೇಕಾಗುತ್ತದೆ. ಸಿಒಪಿಡಿಯಿಂದ ಇತರ ಆರೋಗ್ಯ ಸಮಸ್ಯೆಗಳು
ಸಿಒಪಿಡಿ ತೀವ್ರತೆಗೆ ಅನುಸಾರವಾಗಿ ದೇಹದ ಇತರ ಭಾಗದಲ್ಲಿ ಪರಿಣಾಮ ಬೀರಬಹುದು. ಖನ್ನತೆ ಬರಬಹುದು. ಇವೆಲ್ಲವನ್ನು ತಡೆಯಲು ಸಿಒಪಿಡಿಗೆ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವುದೇ ಚಿಕಿತ್ಸೆಗಿಂತ ಉತ್ತಮ. ಯೋಗ ಉತ್ತಮ ಮದ್ದು
ಪ್ರಾಚೀನ ಯೋಗ ಪದ್ಧತಿ ನೈಸರ್ಗಿಕ ಜೀವನ ಶೈಲಿಯನ್ನು ನಡೆಸಲು ಮಾರ್ಗದರ್ಶನ ನೀಡುತ್ತದೆ. ಯೋಗದ ಶಾಸ್ತ್ರೀಯ ಹಾಗೂ ವೈಜ್ಞಾನಿಕ ಅಭ್ಯಾಸದಿಂದ ಉತ್ತಮ ಆರೋಗ್ಯದ ಜೀವನ ನಮ್ಮದಾಗಿಸಬಹುದು. ಯೋಗ ಚಿಕಿತ್ಸೆಯನ್ನು ಹಠಯೋಗ ಪ್ರದೀಪಿಕಾ, ಪಾತಂಜಲ, ಯೋಗಸೂತ್ರ ಇತ್ಯಾದಿ ಶಾಸ್ತ್ರೀಯ ಪಠ್ಯಗಳು ತಿಳಿಸುತ್ತವೆ. ಅಷ್ಟಾಂಗ ಯೋಗ ವ್ಯಕ್ತಿಯ ಯೋಗಕ್ಷೇಮ ಅಥವಾ ಆರೋಗ್ಯವಾಗಿರುವ ಸ್ಥಿತಿಯನ್ನು ಬೋಧಿಸುತ್ತದೆ. ಆಸನಗಳು ವ್ಯಕ್ತಿಯ ಅಂಗಗಳು, ಗ್ರಂಥಿಗಳು, ಜೀವಕೋಶಗಳು, ನರಮಂಡಲಗಳು ಸುಸ್ಥಿತಿಯಲ್ಲಿಡಲು ಪ್ರೇರಕವಾಗುತ್ತದೆ. ಪ್ರಾಣಾಯಾಮದಿಂದ ಆಮ್ಲಜನಕದ ಬಳಕೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಯೋಗಾಭ್ಯಾಸದ ಬಂಧ, ಮುದ್ರಾ, ಶ್ರಾಂತಿ ಕ್ರಮ, ಪ್ರತ್ಯಾಹಾರ, ಧ್ಯಾನದ ವಿಧಾನಗಳು, ಮನಃಶಾಂತಿ ನೆಮ್ಮದಿಯನ್ನು ನೀಡುತ್ತದೆ. ಸಿಒಪಿಡಿ ಕಾಯಿಲೆಗೆ ಪರಿಣಾಮಕಾರಿಯಾಗಿ ಯೋಗ ಚಿಕಿತ್ಸೆಯನ್ನು ರೋಗದ ಹಂತವನ್ನು ನಿರ್ಧರಿಸಿ ತರಬೇತಿ ಪಡೆದಾಗ ರೋಗದಿಂದ ಗುಣ ಮುಖರಾಗಲು ಸಾಧ್ಯ. ಚಿಕಿತ್ಸೆಗಳೇನು?
ರೋಗ ಲಕ್ಷಣಗಳು ಕಂಡು ಬಂದ ತತ್‌ಕ್ಷಣ ಶ್ವಾಸಕೋಶ ಪರಿಣತ ವೈದ್ಯರನ್ನು ಸಂದರ್ಶಿಸಬೇಕು. ಅವರು ತಪಾಸಣೆ ನಡೆಸಿ, ರಕ್ತಪರೀಕ್ಷೆ, ಎಕ್ಸರೇ ಹಾಗೂ ಸ್ಪೆ „ ರೋಮೀಟರ್ ಎಂಬ ಯಂತ್ರದ ಸಹಾಯದಿಂದ ರೋಗದ ತೀವ್ರತೆಯನ್ನು ಹಾಗೂ ಹಂತವನ್ನು ನಿರ್ಧರಿಸುತ್ತಾರೆ. ಅದರ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ. ಧೂಮಪಾನ ತ್ಯಜಿಸುವುದು, ಸ್ವಚ್ಛ ಪರಿಸರದಲ್ಲಿರುವುದು, ಹೊಗೆ-ಧೂಳುಗಳಿಂದ ದೂರವಿರಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಲಘು ವ್ಯಾಯಾಮ ಮತ್ತು ಉಸಿರಾಟದ ವ್ಯಾಯಾಮ ಪ್ರಯೋಜನಕಾರಿ. ಅತಿ ಗಂಭೀರ ಪ್ರಕರಣವಾಗಿದ್ದರೆ, ಮನೆಯಲ್ಲಿಯೇ ಆಮ್ಲಜನಕ ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು. ಇದರೊಂದಿಗೆ ಯೋಗ ಅಭ್ಯಾಸ ಒಂದು ಪರಿಣಾಮಕಾರಿ ಚಿಕಿತ್ಸೆಯಾಗುತ್ತದೆ. ಕುಶಾಲಪ್ಪ ಗೌಡ ಎನ್.
ಸಂಶೋಧನ ವಿದ್ಯಾರ್ಥಿ,
ಯೇನಪೊಯ ವಿವಿ ದೇರಳಕಟ್ಟೆ