Advertisement
ಬಹುತೇಕ ಪ್ರಧಾನ ತಲೆನೋವುಗಳು ದೃಷ್ಟಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಮೈಗ್ರೇನ್‌ನಲ್ಲಿ ಅದರ ಲಕ್ಷಣಗಳಾದ ಬೆಳಕಿನ ಭಯ, ಸದ್ದಿನ ಭಯದಂತಹ ಲಕ್ಷಣಗಳ ಜತೆಗೆ ತೀವ್ರ ಕಣ್ಣು ನೋವು ಕೂಡ ಇರಬಹುದಾಗಿದೆ. ಕ್ಲಸ್ಟರ್ ತಲೆನೋವಿನಲ್ಲಿ ತಲೆಯ ಒಂದು ಪಾರ್ಶ್ವದಲ್ಲಿ ನೋವಿನ ಜತೆಗೆ ಕೆಂಪಗಾಗುವುದು, ಬಾಧಿತ ಭಾಗದ ಕಣ್ಣಿನಲ್ಲಿ ನೀರು ಸುರಿಯಬಹುದು. ಚಿಂತೆಯ ತಲೆನೋವಿನಲ್ಲಿ ಹಣೆ ಬಿಗಿಹಿಡಿದಂತಹ ಅನುಭವದ ಜತೆಗೆ ಕಣ್ಣು ನೋವು ಕೂಡ ಇರಬಹುದು.
Related Articles
Advertisement
ಇದರಿಂದಾಗಿ ಹತ್ತಿರದ ವಸ್ತುಗಳು ಮಂಜಾಗಿ ಕಾಣುವುದರಿಂದ ಹಣೆಯ ಸ್ನಾಯುಗಳು ದೃಷ್ಟಿ ಕೇಂದ್ರೀಕರಿಸಲು ಬಳಕೆಯಾಗುತ್ತವೆ. ಕಾರ್ನಿಯಾದ ಮೇಲೆ ಅಸಹಜತೆಯಿಂದಾಗಿ ದೃಷ್ಟಿ ಮಂಜಾಗಿ ಅಸ್ಟಿಗ್ಯಾಟಿಸಂ ಅಥವಾ ಅಸಮ ದೃಷ್ಟಿಯು ಉಂಟಾಗುತ್ತದೆ. ಕಣ್ಣುಗಳನ್ನು ಹೆಚ್ಚು ದೀರ್ಘಕಾಲ ಉಪಯೋಗಿಸಲು ಪ್ರಯತ್ನಿಸುವುದರಿಂದಲೂ ಕಣ್ಣುಗಳ ಮೇಲೆ ಒತ್ತಡ ಉಂಟಾಗಿ ತಲೆನೋವು.
ಕಂಪ್ಯೂಟರನ್ನು ದೀರ್ಘಕಾಲ ಕಣ್ಣು ಮಿಟುಕಿಸದೆ ವೀಕ್ಷಿಸುವುದು, ಮಂದ ಬೆಳಕಿನಲ್ಲಿ, ರಾತ್ರಿ ಕಾಲದಲ್ಲಿ ವಾಹನ ಚಲಾಯಿಸುವುದರಿಂದ ಇದು ಉಂಟಾಗಬಹುದು. ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ಪರದೆಯನ್ನು ದೀರ್ಘಕಾಲ, ವಿಶೇಷವಾಗಿ ಎರಡು ತಾಸುಗಳಿಗಿಂತ ಹೆಚ್ಚು ಕಾಲ ವೀಕ್ಷಿಸುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗಬಹುದು.
ಸಾಮಾನ್ಯವಾಗಿ ಕಂಪ್ಯೂಟರ್ ಉಪಯೋಗಿಸುವಾಗ ಕಣ್ಣು ಮಿಟುಕಿಸುವುದು ಅಪ್ರಜ್ಞಾಪೂರ್ವಕವಾಗಿ ಮರೆತುಹೋಗುತ್ತದೆ ಅಥವಾ ನಿಲ್ಲುತ್ತದೆ. ಕಣ್ಣು ಮಿಟುಕಿಸುವುದು ಕಣ್ಣುಗಳನ್ನು ಆದ್ರìವಾಗಿ ಕಾಯ್ದುಕೊಳ್ಳಲು ನೆರವಾಗುವ ಕ್ರಿಯೆಯಾಗಿದೆ. ಡಿಜಿಟಲ್ ಸಾಮಗ್ರಿಗಳ ಪರದೆಯ ಕೋರೈಸುವ ಪ್ರತಿಫಲನವೂ ಕಣ್ಣುಗಳಿಗೆ ಒತ್ತಡ ಉಂಟಾಗಲು ಕಾರಣವಾಗುತ್ತದೆ.
ಇವೆಲ್ಲವುಗಳಿಂದಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳಬಹುದು, ಕಣ್ಣುಗಳಿಗೆ ದಣಿವಾದ ಅನುಭವವಾಗಬಹುದು, ಬೆಳಕಿಗೆ ಕಣ್ಣುಗಳು ಸೂಕ್ಷ್ಮ ಸಂವೇದಿಯಾಗಬಹುದು, ಕಣ್ಣುಗಳು ಉರಿಯಬಹುದು. ಮಂದ ಬೆಳಕಿನಲ್ಲಿ ಓದುವುದು, ಬರೆಯುವುದು ಅಥವಾ ಹೊಲಿಯುವುದರಿಂದಲೂ ಕಣ್ಣುಗಳಿಗೆ ಒತ್ತಡವಾಗುತ್ತದೆ. ಕಣ್ಣುಗಳಿಗೆ ಒತ್ತಡವಾದ ಲಕ್ಷಣಗಳು ಇದ್ದರೆ ನೇತ್ರತಜ್ಞರನ್ನು ಕಾಣುವುದು ಮುಖ್ಯ. ದೃಷ್ಟಿ ದೋಷಗಳನ್ನು ಸರಿಯಾದ ಕನ್ನಡಕ ಅಥವಾ ಲೆನ್ಸ್ ಉಪಯೋಗಿಸಿ ಸುಲಭವಾಗಿ ಸರಿಪಡಿಸಬಹುದಾಗಿದೆ.
–ಡಾ| ರೋಹಿತ್ ಪೈ,
ಕನ್ಸಲ್ಟೆಂಟ್ ನ್ಯುರಾಲಜಿ
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ಮತ್ತು ನ್ಯೂರಾಲಜಿ ವಿಭಾಗ, ಕೆಎಂಸಿ, ಮಂಗಳೂರು)