Advertisement

ಮುಂಬೈನಲ್ಲಿ ಮನಸೆಳೆದ 65 ಅಡಿ ಎತ್ತರದ ಮಂಗಳೂರಿಗರ ಕ್ರಿಸ್ಮಸ್ ಟ್ರೀ

07:35 AM Dec 26, 2017 | Team Udayavani |

ಮುಂಬೈ: ಕ್ರಿಸ್‌ಮಸ್‌ ಪ್ರಯುಕ್ತ ಮಂಗಳೂರು ಮೂಲದ ಸಲ್ಡಾನ್ಹಾ ಕುಟುಂಬದವರ 65 ಅಡಿ ಎತ್ತರದ ಬೃಹತ್‌ ಕ್ರಿಸ್‌ಮಸ್‌ ಟ್ರೀ ಈಗ ಮುಂಬೈನಲ್ಲಿ ಆಕರ್ಷಣೆಯ ಕೇಂದ್ರಬಿಂದು. ಇದು ದೇಶದಲ್ಲೇ ಅತಿ ಎತ್ತರದ ಕ್ರಿಸ್‌ಮಸ್‌ ಟ್ರೀ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರ್ಶ ನಗರ ಸೊಸೈಟಿಯಲ್ಲಿರುವ ಈ ಟ್ರೀಗೆ 10 ಸಾವಿರ ಲೈಟ್‌ಗಳು, ಗಂಟೆಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸಾಂತಾ ಕ್ಲಾಸ್‌ ಚಿತ್ರವನ್ನೂ ಅಂಟಿಸಲಾಗಿದೆ.

Advertisement

ನೆರೆಯವರಿಂದ ನಾಲ್ಕು ದಶಕಗಳ ಹಿಂದೆ ಕೇವಲ 250 ರೂ. ಗೆ ಸಸ್ಯವೊಂದನ್ನು ಖರೀದಿಸಿದ್ದರು. ಇದನ್ನು ತಂದು ತಮ್ಮ ಮನೆ ಎದುರು ನೆಟ್ಟ ಕುಟುಂಬ, ಕಾಲಕಾಲಕ್ಕೆ ನೀರು ಹಾಗೂ ಗೊಬ್ಬರ ನೀಡಿ ಬೆಳೆಸಿದೆ. ಕಳೆದ 12 ವರ್ಷಗಳಿಂದಲೂ ಪ್ರತಿ ಕ್ರಿಸ್‌ಮಸ್‌ನಲ್ಲೂ ಇದಕ್ಕೆ ಮನಮೋಹಕವಾಗಿ ಅಲಂಕಾರ ಮಾಡಲಾಗುತ್ತಿದೆ ಎಂದು ಡಗ್ಲಾಸ್‌ ಸಲ್ಡಾನ್ಹಾ ಹೇಳಿದ್ದಾರೆ.

ಮರದ ಕೊನೆಯಲ್ಲಿರುವ ರೆಂಬೆಯಿಂದ ಬುಡದವರೆಗೂ ಎಲ್ಲೆಡೆ ದೀಪಗಳನ್ನು ಕಟ್ಟಲಾಗುತ್ತದೆ. 2005ರ ವರೆಗೂ ಸೋದರಿ ಟ್ವಿಲಾ ಇವರಿಗೆ ಸಹಾಯ ಮಾಡುತ್ತಿದ್ದರಂತೆ. ನಂತರ ಅವರು ಮರಣವನ್ನಪ್ಪದ ನಂತರ. 56 ವರ್ಷದ ಡಗ್ಲಾಸ್‌ ಒಂಟಿಯಾಗಿಯೇ ಅಲಂಕಾರ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next