ಮಂಗಳೂರು : ಕ್ರಿಸ್ಮಸ್ ಉತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಮಂಗಳೂರು ಜಂಕ್ಷನ್ ಹಾಗೂ ಗುಜರಾತ್‌ನ ಉಧ್ನಾ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ನಂ. 09057 ಉಧ್ನಾ – ಮಂಗಳೂರು ಜಂಕ್ಷನ್ ವಿಶೇಷ ರೈಲು ಉಧ್ನಾ ದಿಂದ ಡಿ. 21, 25, 28 ಹಾಗೂ ಜನವರಿ 1ರಂದು (ಬುಧ, ರವಿವಾರ) ರಾತ್ರಿ 8ಕ್ಕೆ ಹೊರಟು ಮಂಗಳೂರು ಜಂಕ್ಷನ್‌ಗೆ ಮರುದಿನ ಸಂಜೆ 6.30ಕ್ಕೆ ತಲುಪಲಿದೆ.
ನಂ. 09058 ಮಂಗಳೂರು ಜಂಕ್ಷನ್ – ಉಧ್ನಾ ರೈಲು ಮಂಗಳೂರು ಜಂಕ್ಷನ್‌ನಿಂದ ಡಿ. 22, 26, 29 ಹಾಗೂ ಜನವರಿ 2ರಂದು (ಗುರು ಸೋಮವಾರ) ಹೊರಟು ಮರುದಿನ ರಾತ್ರಿ 7.25ಕ್ಕೆ ಉಧ್ನಾ ತಲುಪಲಿದೆ. ಒಟ್ಟು ನಾಲ್ಕು ಸೇವೆಗಳಿರುತ್ತವೆ.
ವಲ್ಸಡ್, ವಾಪಿ, ಫಾಲ್ಗರ್, ವಸಾೖ ರೋಡ್, ಪನ್ವೇಲ್, ರೋಹ, ಖೇಡ್, ಚಿಪ್ಳೂಣ, ಸಂಗಮೇಶ್ವರ ರೋಡ್, ರತ್ನಾಗಿರಿ, ಕಂಕಾವಿಲಿ, ಸಿಂಧೂದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ,
ಮಡಗಾಂವ್, ಕಾಣಕೋಥ, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ಗಳಲ್ಲಿ ನಿಲುಗಡೆ ಹೊಂದಿದೆ.