Advertisement
ಅಧಿಕಾರ ವರ್ಗ ಒಂದೆಡೆ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರೆ ಕ್ರೈಸ್ತ ಬಾಂಧವರು ಮತದಾನದ ಜತೆಗೆ ಕ್ರಿಸ್ಮಸ್ ಆಚರಣೆಯತ್ತ ಗಮನಹರಿಸಿದ್ದಾರೆ. ಕ್ರಿಬ್‌ಗಳ ತಯಾರಿ, ಅಂಗಡಿಗಳಲ್ಲಿ ಸಾಂತಕ್ಲೋಸ್ ಬಟ್ಟೆಗಳು, ಬೇಕರಿಗಳಲ್ಲಿ ಕುಸ್ವಾರ್ ಸಹಿತ ಹಲವು ಬಗೆಯ ಸಿಹಿ ತಿನಿಸುಗಳು ಗ್ರಾಹಕರನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತಿವೆ.
ನಗರದ ಹಲವಾರು ಬೇಕರಿಗಳಲ್ಲಿ ಕುಸ್ವಾರ್ ತಿನಿಸುಗಳಾದ ಕುಕೀಸ್, ನೇವ್ರಿ, ಕಲ್‌ಕಲ್, ರೈಸ್ ಮಾರ್ಬಲ್ಸ್ (ಗುಳಿಯಾ), ಅಕ್ಕಿ ಲಾಡು, ಗುಣಮಟ್ಟದ ಚಕ್ಕುಲಿ, ತುಕ್ಕುಡಿ, ಖಾರದಕಡ್ಡಿ, ಕೋಡುಬಳೆ, ಡ್ರೈಫೂÅಟ್ಸ್ ಗಳಾದ ಬಾದಾಮ್, ಪಿಸ್ತಾ, ಅಜೀರ್, ವಾಲ್‌ನಟ್, ದ್ರಾಕ್ಷಿ, ಅಪ್ರಿಕಾಟ್, ಗೇರುಬೀಜಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುವಂತೆ ಮಾಡುತ್ತಿದೆ. ಹಲವಾರು ಬಗೆಯ ಕೇಕ್‌ಗಳೂ ಗಮನಸೆಳೆಯುತ್ತಿವೆ.
Related Articles
ಕ್ರೈಸ್ತ ಬಾಂಧವರ ಮನೆಯಲ್ಲೂ ತಿಂಡಿ-ತಿನಿಸುಗಳನ್ನು ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ. ಅಕ್ಕಿಯಿಂದ ತಯಾರಿಸಿದ ಲಾಡು, ಗುಳಿಯೋ, ಕುಕ್ಕೀಸ್, ನೆವೆ, ಕಿಡಿಯೋ, ಚಕ್ಕುಲಿ, ಕೇಕ್, ಖಾರಕಡ್ಡಿಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಸಮೀಪದಲ್ಲಿರುವ ಎಲ್ಲ ಸಮುದಾಯದ ಬಾಂಧವರಿಗೆ ಹಂಚುವ ಪ್ರಕ್ರಿಯೆಯೂ ಕ್ರಿಸ್ಮಸ್ ಹಬ್ಬದಂದು ನಡೆಯಲಿದೆ.
Advertisement
ಚರ್ಚ್‌ಗಳಲ್ಲಿ ಸರಳ ಆಚರಣೆಕೋವಿಡ್ ಕಾರಣದಿಂದಾಗಿ ಈ ಬಾರಿ ಉಡುಪಿ ಧರ್ಮಪ್ರಾಂತ್ಯದ ಎಲ್ಲ 52 ಚರ್ಚ್ ಗಳಲ್ಲಿಯೂ ಸರಳ ರೀತಿಯಲ್ಲಿ ಕ್ರಿಸ್ಮಸ್ ಆಚರಣೆ ನಡೆಯಲಿದೆ. ಬಲಿಪೂಜೆಗಳು ವರ್ಷಂಪ್ರತಿಯಂತೆ ನೆರವೇರಲಿದೆ.ಕೇಕ್ ಹರಾಜು ಹಾಕುವುದು, ಕ್ಯಾರಲ್ಸ್ ಹಾಡು, ಗೋದಲಿ ಸ್ಪರ್ಧೆ, ಕ್ಯಾರಲ್ಸ್ ಹಾಡುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿ ಕಡಿವಾಣ ಹಾಕಲಾಗಿದೆ. ಸಕಲ ಮುನ್ನೆಚ್ಚರಿಕೆ
ಸರಕಾರದ ನಿಯಮಾಳಿಯಂತೆ ಚರ್ಚ್ ಒಳಗಡೆ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುತ್ತದೆ. ಚರ್ಚ್‌ನ ದ್ವಾರಗಳಲ್ಲಿ
ಸಿಬಂದಿ ಭಕ್ತರಿಗೆ ಸ್ಯಾನಿಟೈಸರ್ ನೀಡಲಿದ್ದಾರೆ. ಮಾಸ್ಕ್ ಧರಿಸದವರಿಗೆ ಮಾಸ್ಕ್ಗಳನ್ನೂ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸರಳವಾಗಿ ಆಚರಣೆ
ಕೋವಿಡ್ ಕಾರಣದಿಂದಾಗಿ ಎಲ್ಲ ರೀತಿಯ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸರಳ ರೀತಿಯಲ್ಲಿ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಆಚರಿಸಲು ನಿರ್ಧರಿಸಲಾಗಿದೆ. ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಎಂದಿನಂತೆಯೇ ಹಬ್ಬಗಳನ್ನು ಆಚರಿಸಲಿದ್ದಾರೆ. ಯಾವುದೇ ರೀತಿಯ ದುಂದುವೆಚ್ಚಗಳನ್ನು ಮಾಡದೆ ಹಬ್ಬ ಆಚರಿಸುವಂತೆ ಸಲಹೆ ನೀಡಲಾಗಿದೆ.
– ರೆ| ಫಾ| ಡಾ| ಐಸಾಕ್ ಲೋಬೋ , ಉಡುಪಿಯ ಬಿಷಪ್