Advertisement
ಬೆಳಕು ಬೇಕು ಎಂದಾಗಲೆಲ್ಲ ನಾವು ದೀಪವನ್ನು ಹೊತ್ತಿಸಿ ಕತ್ತಲೆಯನ್ನು ಹೋಗಲಾಡಿಸಬೇಕಾಗಿದೆ. ದೇವರಿಂದ ಹೊರಹೊಮ್ಮಿದ ನಿಜ ಬೆಳಕು ಮಾತ್ರ ಈ ಕತ್ತಲೆಯನ್ನು ಹೋಗಲಾಡಿಸಬಲ್ಲದು. ಇದು ಆಧ್ಯಾತ್ಮಿಕ ಜ್ಯೋತಿ. “ಕತ್ತಲಿನಲ್ಲಿ ಸಂಚರಿಸುತ್ತಿದ್ದ ಜನರಿಗೆ ಒಂದು ಮಹಾಜ್ಯೋತಿ ಕಾಣಿಸಿತು. ಮರಣದ ನೆರಳಿನಲ್ಲಿ ನೆಲೆಸಿದ ನಾಡಿನಲ್ಲಿ ಆ ಜ್ಯೋತಿ ಪ್ರಜ್ವಲಿಸಿತು’ (ಯೆಶಾಯಾ 9:2). ಈ ದೀರ್ಘ ದರ್ಶನ ದೇಹಾಂಬರವಾಗಿ ಈ ಲೋಕದಲ್ಲಿ ಜನ್ಮತಳೆದು ಪ್ರಭು ಕ್ರಿಸ್ತರಲ್ಲಿ ಪ್ರತ್ಯಕ್ಷವಾಯಿತು. “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ’ (ಯೋವಾ 8:12) “ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ’ ಎಂದರು ಪ್ರಭು ಯೇಸು.
– ಡಾ| ಜೆರಾಲ್ಡ್ ಐಸಾಕ್ ಲೋಬೊ, ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ