Advertisement

Christmas: ಕ್ರಿಸ್‍ಮಸ್ ಹಬ್ಬಕ್ಕೆ ಸಜ್ಜುಗೊಳ್ಳುತ್ತಿದೆ ಗೋವಾ ಮಾರುಕಟ್ಟೆ

04:30 PM Dec 11, 2023 | Team Udayavani |

ಪಣಜಿ: ರಾಜ್ಯದಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮಾಚರಣೆಯ ಸಿದ್ಧತೆ ಆರಂಭಗೊಂಡಿದ್ದು ಕ್ರಿಸ್‍ಮಸ್ ಹಬ್ಬದ ವಿವಿಧ ವಸ್ತುಗಳು ಮಾರುಕಟ್ಟೆಗೆ ಬರುತ್ತಿವೆ. ಅಲಂಕಾರಗಳು, ವಿದ್ಯುತ್ ದೀಪಗಳ ಮಾಲೆಗಳು, ಕ್ರಿಸ್ಮಸ್ ಟ್ರೀಗಳು, ಸಂತಾ ಮಾಸ್ಕ್ ಗಳು, ಸ್ನೋಬಾಲ್ ಗಳು, ಟೋಪಿಗಳು, ಸಿದ್ಧವಾದ ಕೊಟ್ಟಿಗೆಗಳು ಮತ್ತು ವರ್ಣರಂಜಿತ ನಕ್ಷತ್ರಗಳು ಮಾರುಕಟ್ಟೆ ಪ್ರವೇಶಿಸಿವೆ.

Advertisement

ಕ್ರಿಸ್‍ಮಸ್ ಹಬ್ಬದ ಹಿನ್ನೆಲೆಯಲ್ಲಿ ನಾಗರಿಕರು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದನ್ನು ಕಾಣಬಹುದು. ಹಬ್ಬದ ನಿಮಿತ್ತ ಕ್ರೈಸ್ತ ಬಾಂಧವರ ಮನೆಗಳನ್ನೂ ಸ್ವಚ್ಛಗೊಳಿಸಿ ಬಣ್ಣ ಬಳಿದು ಸಿದ್ಧಪಡಿಸುತ್ತಿದ್ದಾರೆ. ಕ್ರಿಸ್‍ಮಸ್‍ಗೆ ಇನ್ನೂ ಎರಡು ವಾರಗಳು ಬಾಕಿಯಿದ್ದು, ಮಾರಾಟಗಾರರು ಇನ್ನೂ ನಿರೀಕ್ಷಿತ ಪ್ರತಿಕ್ರಿಯೆಯನ್ನು ಪಡೆಯದಿದ್ದರೂ, ಶಾಪಿಂಗ್ ಈಗಾಗಲೇ ಪ್ರಾರಂಭವಾಗಿದೆ. ನಾಗರಿಕರು ಕ್ರಿಸ್ಮಸ್ ಕೇಕ್ ಮತ್ತು ಸಿಹಿತಿಂಡಿಗಳನ್ನು ಸಹ ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಲಂಕಾರ ಸಾಮಗ್ರಿಗಳ ಬೆಲೆ ಶೇ.5ರಿಂದ 10ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಮಾರಾಟಗಾರರು.

ಕ್ರಿಸ್‍ಮಸ್‍ಗಾಗಿ ಮನೆಗಳು, ಪ್ರಾರ್ಥನಾ ಮಂದಿರಗಳು ಮತ್ತು ಶಿಲುಬೆಗಳನ್ನು ಅಲಂಕರಿಸುವ ಕೆಲಸ ಪ್ರಾರಂಭವಾಗಿದೆ. ಏಸುಕ್ರಿಸ್ತರ ಜನನವನ್ನು ಆಧರಿಸಿ ಭವ್ಯ ದೃಶ್ಯಗಳನ್ನು ನಿರ್ಮಿಸುವ ಕೆಲಸವೂ ಕೆಲವೆಡೆ ಆರಂಭವಾಗಿದೆ.

ಇದನ್ನೂ ಓದಿ: ICC player of the month; ಶಮಿ,ಮ್ಯಾಕ್ಸವೆಲ್ ಹಿಂದಿಕ್ಕಿ ಪ್ರಶಸ್ತಿ ಗೆದ್ದ ಟ್ರಾವಿಸ್ ಹೆಡ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next