Advertisement

ಕ್ರಿಸ್‌ಮಸ್‌ ಸಂಭ್ರಮ; ಸಾಮೂಹಿಕ ಪ್ರಾರ್ಥನೆ

01:09 PM Dec 26, 2020 | Adarsha |

ಧಾರವಾಡ: ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಕ್ರೈಸ್ತ ಸಮುದಾಯದವರು ಶುಕ್ರವಾರ ಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ಬೆಳಗ್ಗೆಯಿಂದಲೇ ಹೊಸ ಬಟ್ಟೆ ಧರಿಸಿ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಸಮುದಾದವರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಇಲ್ಲಿನ ಪ್ರೊಟೆಸ್ಟೆಂಟ್‌ ಮತ್ತು ಕ್ಯಾಥೋಲಿಕ್‌, ಹೆಬಿಕ್‌ ಮೆಮೋರಿಯಲ್‌ ಚರ್ಚ್‌ಗಳು ಎರಡು ದಿನಗಳಿಂದ ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಹೆಬಿಕ್‌ ಮೆಮೋರಿಯಲ್‌ ಚರ್ಚ್‌ನಲ್ಲಿ ಬಿಷಪ್‌ ರವಿಕುಮಾರ ನಿರಂಜನ ಅವರು ಕ್ರಿಸ್‌ಮಸ್‌ ಸಂದೇಶ ನೀಡಿದರು.

ಇದನ್ನೂ ಓದಿ:ಕಾಂಗ್ರೆಸ್‌ನವರು ರೈತರಲ್ಲಿ ಸಂಶಯದ ಭೂತ ಬಿಟ್ಟಿದ್ದಾರೆ

ಅನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಏಸುವಿನ ಜನ್ಮ ವೃತ್ತಾಂತ ಹೇಳುವ ರೂಪಕಗಳು ಗಮನ ಸೆಳೆದವು. ನಗರದ ಕಿಟೆಲ್‌ ಕಾಲೇಜು, ಬಾಸೆಲ್‌ ಮಿಷನ್‌ ಶಿಕ್ಷಣ ಸಂಸ್ಥೆಗಳಲ್ಲಿ ಸಂಭ್ರಮದ ಕ್ರಿಸ್‌ ಮಸ್‌ ಆಚರಣೆ ನಡೆಯಿತು. ಇದಲ್ಲದೇ ಹಬ್ಬದ ಪ್ರಯುಕ್ತ ಮಿಶ್ರಾ ಸೇರಿದಂತೆ ವಿವಿಧ ಮಳಿಗೆಗಳಲ್ಲಿ ವಿವಿಧ ಬಗೆಯ ಕೇಕ್‌ಗಳ ಮಾರಾಟವೂ ಜೋರಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next