Advertisement

Belthangady; ಭಾರತೀಯತೆ ಸಂಪೂರ್ಣ ಒಪ್ಪಿಕೊಂಡವರು ಕ್ರೈಸ್ತರು: ಡಾ| ಹೆಗ್ಗಡೆ

11:34 PM Feb 11, 2024 | Team Udayavani |

ಬೆಳ್ತಂಗಡಿ: ಕೇರಳದಿಂದ ಕರ್ನಾಟಕಕ್ಕೆ ಬಂದು ನೆಲೆನಿಂತ ಸಿರಿಯನ್‌ ಕಥೋಲಿಕ್‌ ಕ್ರೈಸ್ತ ಸಮುದಾಯ ಅನೇಕ ಸವಾಲುಗಳ ನಡುವೆ ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದ ಪ್ರಗತಿಗೆ ಕಾರಣರಾದರು. ಭಾರತದಲ್ಲಿ ಭಾರತೀಯತೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡ ಸಮಾಜವಿದ್ದರೆ ಅದು ಕ್ರೈಸ್ತ ಸಮುದಾಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಕರ್ನಾಟಕದ ಪ್ರಥಮ ಸೀರೋ ಮಲಬಾರ್‌ ಧರ್ಮಪ್ರಾಂತವಾದ ಬೆಳ್ತಂಗಡಿ ಧರ್ಮಪ್ರಾಂತದ 25 ವರ್ಷ ಸಂಭ್ರಮ ಹಾಗೂ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬಿಷಪ್‌ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ ಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ ಅನೇಕ ದಶಕಗಳಿಂದ ಸರ್ವಧರ್ಮ ಸಮ್ಮೇಳನ ನಡೆಸುತ್ತ¤ ಬಂದಿದ್ದೇವೆ. ಕಳೆದ 25 ವರ್ಷಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಪ್ರೀತಿ ಬೆಳೆಸಿದ ಬೆಳ್ತಂಗಡಿ ಧರ್ಮಪ್ರಾಂತ ಹಾಗೂ ಬಿಷಪ್‌ ಅವರ ಸೇವೆಯನ್ನು ಅವರು ಶ್ಲಾಘಿಸಿದರು.

ಧರ್ಮವನ್ನು ದೂಷಿಸಬೇಡಿ
ಪ್ರಜಾಪ್ರಭುತ್ವ ಎಲ್ಲರಿಗೂ ಸಮಾನ ಹಕ್ಕು ನೀಡಿದೆೆ. ರಾಜ್ಯ ಸರಕಾರ ಎಲ್ಲ ಧರ್ಮ ಜಾತಿಯವರಿಗಾಗಿ 5 ಗ್ಯಾರಂಟಿ ನೀಡಿದೆ ಎಂದರು.

ಎಲ್ಲರಿಗೂ ಮಾದರಿ
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಯಾವುದೇ ಮೂಲ ಸೌಕರ್ಯವಿಲ್ಲದ ಕಾಲದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ ರಚನೆಯಾಗಿ ಎಲ್ಲ ವರ್ಗದ ಜನರಿಗೆ ಎಲ್ಲ ರೀತಿಯ ಸೇವೆ ಮಾಡಿ ಬದುಕು ಬೆಳಗಿರುವುದು ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಿದೆ ಎಂದರು.

Advertisement

ಸಿರೋ ಮಲಬಾರ್‌ ಕೆಥೋಲಿಕ್‌ ಚರ್ಚ್‌ನ ಮೇಜರ್‌ ಆರ್ಚ್‌ ಬಿಷಪ್‌ ರೈ| ರೆ| ಡಾ| ರಾಫಾಯಲ್‌ ತಟ್ಟಿಲ್‌ ಕಾರ್ಯಕ್ರಮ ಉದ್ಘಾಟಿಸಿ, ಬಡವರ್ಗದ ಮತ್ತು ದೀನ ದಲಿತರನ್ನು ಮುಖ್ಯವಾಹಿನಿಗೆ ತರುವುದು ಧರ್ಮಪ್ರಾಂತದ ಮುಖ್ಯ ಗುರಿಯಾಗಿದೆ ಎಂದರು.

ತಲಚೇರಿಯ ಆರ್ಚ್‌ ಬಿಷಪ್‌ ರೈ| ರೆ| ಜೋಸೆಪ್‌ ಪಾಂಪ್ಲಾನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಹರೀಶ್‌ ಪೂಂಜ, ಅಶೋಕ್‌ ಕುಮಾರ್‌ ರೈ, ಬೆಂಗಳೂರಿನ ಆರ್ಚ್‌ ಬಿಷಪ್‌ ರೈ| ರೆ| ಪೀಟರ್‌ ಮಚಾಡೋ, ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪೌಲ್‌ ಸಲ್ದಾನ ಶುಭಹಾರೈಸಿದರು.

ಕೊಟ್ಟಯಾಂನ ಆರ್ಚ್‌ ಬಿಷಪ್‌ ರೈ| ರೆ| ಮ್ಯಾಥ್ಯೂ ಮೂಲಕ್ಕಟ್‌, ಬ್ರಹ್ಮಾವರ ಬಿಷಪ್‌ ರೈ| ರೆ| ಜೋಕಬ್‌ ಮಾರ್‌ ಎಲಿಯಾಸ್‌, ಪುತ್ತೂರು ಬಿಷಪ್‌ ರೈ| ರೆ| ಗೀವರ್ಗೀಸ್‌ ಮಕೋರಿಸ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್‌ ಸೊರಕೆ, ಕೆ. ಗಂಗಾಧರ ಗೌಡ, ವಿ.ಪ.ಸದಸ್ಯರಾದ ಕೆ.ಹರೀಶ್‌ ಕುಮಾರ್‌, ಕೆ. ಪ್ರತಾಪಸಿಂಹ ನಾಯಕ್‌, ಕ್ರೈಸ್ತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಆರ್‌.ಲೋಬೋ, ಮಾಜಿ ಎಂಎಲ್‌ಸಿ ಐವನ್‌ ಡಿ’ಸೋಜಾ ಇತರರು ಉಪಸ್ಥಿತರಿದ್ದರ‌ು.

ಧರ್ಮಪ್ರಾಂತದಿಂದ 25 ಬಡ ಕುಟುಂಬಗಳಿಗೆ ಕಟ್ಟಿಕೊಟ್ಟ ಮನೆಯ ಕೀಲಿಕೈಯನ್ನು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಸ್ತಾಂತರಿಸಿದರು. ಬೆಳಗ್ಗೆ 8.45ಕ್ಕೆ ಕೃತಜ್ಞತಾ ದಿವ್ಯಬಲಿಪೂಜೆ ನಡೆಯಿತು. ಧರ್ಮಪ್ರಾಂತದ ವಿಕಾರ್‌ ಜನರಲ್‌ ಜೋಸೆಫ್‌ ವಲಿಯಪರಂಬಿಲ್‌ ಸ್ವಾಗತಿಸಿದರು. ಲಿಲ್ಲಿ ಆ್ಯಂಟನಿವಂದಿಸಿ, ಫಾ| ಜೋಬಿ ಪಲ್ಲಟ್‌ ಹಾಗೂ ಏಂಜಲ್‌ ಉಡುಪಿ ನಿರೂಪಿಸಿದರು.

ಎಲ್ಲ ವರ್ಗದ ಜನರ ಉದಾತ್ತ ಅಭಿಮಾನ ಸಿಕ್ಕಿದೆ
ಧರ್ಮಪ್ರಾಂತದ ಧರ್ಮಗುರುಗಳಾಗಿ 25 ವರ್ಷ ಪೂರೈಸಿದ ಬಿಷಪ್‌ ರೈ| ರೆ| ಲಾರೆನ್ಸ್‌ ಮುಕ್ಕುಯಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೇವರ ಅಪಾರವಾದ ಆಶೀರ್ವಾದದಿಂದ ಸಮಾಜದ ಅಭಿವೃದ್ಧಿಗೆ ಅಳಿಲು ಸೇವೆಯನ್ನು ಮಾಡುವ ಪ್ರಯತ್ನ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next