Advertisement

ಮಂಗಳೂರು: ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರ ಧ್ವಂಸ; ಸ್ಥಳಕ್ಕೆ ಡಿಸಿಪಿ,ಶಾಸಕರ ಭೇಟಿ

07:17 PM Feb 06, 2022 | Team Udayavani |

ಮಂಗಳೂರು: ಉರುಂದಾಡಿ ಗುಡ್ಡೆಯಲ್ಲಿ ಪಂಜಿಮೊಗರು ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರವನ್ನು ಧ್ವಂಸಗೊಳಿಸಿದ ಘಟನೆ ನಡೆದ ಒಂದು ದಿನದ ನಂತರ, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಮ್ ಶಂಕರ್, ಮಂಗಳೂರು ಉತ್ತರ ಶಾಸಕ ಡಾ ಭರತ್ ವೈ ಶೆಟ್ಟಿ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

Advertisement

ಶಾಸಕ ಭರತ್ ಶೆಟ್ಟಿ ಮಾತನಾಡಿ, 2005ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿಗೆ ಸರಕಾರಿ ಜಾಗ ಮಂಜೂರಾಗಿದೆ. ಈ ಮಾಹಿತಿಯನ್ನು ಆರ್‌ಟಿಸಿಯಲ್ಲಿ ನಮೂದಿಸಲಾಗಿದೆ. ಸರ್ಕಾರಿ ಜಮೀನಿನ ಪಕ್ಕದ ಜಮೀನು ಸ್ಟೇ ಆದೇಶದ ಬಗ್ಗೆ ಹಕ್ಕು ಚಲಾಯಿಸಿದವರಿಗೆ ಸೇರಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಅಂಗನವಾಡಿಗೆ ಈಗಾಗಲೇ 16 ಲಕ್ಷ ರೂಪಾಯಿ ಮಂಜೂರಾಗಿದೆ ಎಂದರು.

ಇಲಾಖೆಯಿಂದ ಕಟ್ಟಡ ನೆಲಸಮವಾಗಿದೆಯೇ ಅಥವಾ ಬೇರೆಯವರು ನೆಲಸಮ ಮಾಡಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಅಲ್ಲದೆ, ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಈ ವಿಷಯದ ಕೋಮು ಕೋನವನ್ನು ತಳ್ಳಿಹಾಕಿದ್ದಾರೆ.

Advertisement

ಸಮೀಪದಲ್ಲೇ 3 ಸೆಂಟ್ ಜಾಗವಿದೆ.ಅಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಿ ಅವರ ಧಾರ್ಮಿಕ ಕ್ರಿಯೆ ನಡೆಸಬಹುದಾಗಿದೆ. ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು.ಯಾರ ಮೇಲೂ ಒತ್ತಾಯ ಪೂರ್ವಕವಾಗಿ, ಆಮಿಷಗಳನ್ನು ತೋರಿಸಿ ಧರ್ಮ ಬದಲಾವಣೆಗೆ ಯತ್ನ ಮಾಡಕೂಡದು ಎಂದು ಎಚ್ಚರಿಕೆ ನೀಡಿದರು.ಕಟ್ಟಡ ಧ್ವಂಸಗೈದ ಬಗ್ಗೆ ಪೊಲೀಸರೇ ಸೂಕ್ತ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next