Advertisement

60 ಮೀ. ಓಟ: ಕೋಲ್ಮನ್‌ ವಿಶ್ವದಾಖಲೆ

06:30 AM Feb 20, 2018 | |

ಲಾಸ್‌ ಏಂಜಲೀಸ್‌: ಅಲುಕರ್ಕ್‌ನಲ್ಲಿ ನಡೆದ ಯುಎಸ್‌ ಚಾಂಪಿಯನ್‌ಶಿಪ್‌ನ ಒಳಾಂಗಣ ಕ್ರೀಡಾಂಗಣದ 60 ಮೀ. ಓಟವನ್ನು 6.34 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಅಮೆರಿಕದ “ರೈಸಿಂಗ್‌ ಸ್ಟಾರ್‌’ ಕ್ರಿಸ್ಟಿಯನ್‌ ಕೋಲ್ಮನ್‌ ವಿಶ್ವದಾಖಲೆ ಬರೆದಿದ್ದಾರೆ.

Advertisement

60 ಮೀ. ವೇಗದ ಓಟದ ಸ್ಪರ್ಧೆಯಲ್ಲಿ 1998ರಲ್ಲಿ ಅಮೆರಿಕದ ಮೌರಿಸ್‌ ಗ್ರೀನ್‌ 6.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. 21ರ ಹರೆಯದ ಕೋಲ್ಮನ್‌ ಹಳೆ ದಾಖಲೆಗಿಂತ 0.05 ಸೆಕೆಂಡ್‌ ವೇಗವಾಗಿ ಓಟ ಮುಗಿಸಿದರು. 6.40 ಸೆಕೆಂಡ್‌ನ‌ಲ್ಲಿ ಗುರಿ ತಲುಪಿದ ರೋನಿ ಬೇಕರ್‌ ದ್ವಿತೀಯ ಸ್ಥಾನ ಗಳಿಸಿದರು.

ಕಳೆದ ಜ. 19ರಲ್ಲಿ ಕ್ಲೆಮ್ಸನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೋಲ್ಮನ್‌ ಇದೇ ಓಟವನ್ನು 6.37 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಗ್ರೀನ್ಸ್‌ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟುವ ಸುಳಿವು ನೀಡಿದ್ದರು. ಆದರೂ ಗ್ರೀನ್ಸ್‌ ಸಾಧನೆಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ, ಗ್ರೀನ್ಸ್‌ ಕಾಲದ ಕ್ರೀಡಾಕೂಟಗಳಲ್ಲಿ ಎಲೆಕ್ಟ್ರಾನಿಕ್‌ ಸ್ಟಾರ್ಟಿಂಗ್‌ ಬ್ಲಾಕ್‌ಗಳನ್ನು ಬಳಸುತ್ತಿರಲಿಲ್ಲ ಎಂಬ ಮಾತುಗಳು ಕ್ರೀಡಾ ವಲಯದಲ್ಲಿ ಕೇಳಿಬಂದಿವೆ.

2017ರಿಂದೀಚೆಗೆ ವೇಗದ ಓಟಗಾರರಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಮನ್‌, ಲಂಡನ್‌ ಒಲಿಂಪಿಕ್ಸ್‌ನ 100 ಮೀ.ನಲ್ಲಿ ತೃತೀಯ ಸ್ಥಾನ ಗಳಿಸಿ ವಿಶ್ವದ ಗಮನ ಸೆಳೆದಿದ್ದರು. ಈ ಸಂದರ್ಭ ಮಿಂಚಿನ ಓಟಗಾರ ಉಸೇನ್‌ ಬೋಲ್ಟ್ ಮತ್ತು ಜಸ್ಟಿನ್‌ ಗ್ಯಾಟಿನ್‌ ಮೊದಲೆರಡು ಸ್ಥಾನ ಅಲಂಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next