Advertisement

ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಕ್ರಿಸ್‌ ಮಾರಿಸ್‌ ಕ್ರಿಕೆಟ್‌ ವಿದಾಯ

10:13 AM Jan 12, 2022 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಅನುಭವಿ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

Advertisement

“ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಹಿಂದೆ ಸರಿಯುತ್ತಿದ್ದೇನೆ. ಈ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಇದೊಂದು ಮೋಜಿನ ಯಾನವಾಗಿತ್ತು. ಇನ್ನು ಮುಂದೆ ದೇಶಿ ಕ್ರಿಕೆಟ್‌ನಲ್ಲಿ ಟೈಟಾನ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದೇನೆ’ ಎಂದು ಮಾರಿಸ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್‌

ದಕ್ಷಿಣ ಆಫ್ರಿಕಾ ಪರ 69 ಅಂತಾರಾಷ್ಟ್ರೀಯ ಪಂದ್ಯಗಳಾ ಡಿರುವ ಮಾರಿಸ್‌, 773 ರನ್‌ ಹಾಗೂ 94 ವಿಕೆಟ್‌ ಸಂಪಾದಿಸಿದ್ದಾರೆ. ಐಪಿಎಲ್‌ನಲ್ಲಿ 81 ಪಂದ್ಯಗಳಾಡಿದ್ದು, 618 ರನ್‌ ಜತೆಗೆ 95 ವಿಕೆಟ್‌ ಉರುಳಿಸಿದ್ದಾರೆ. ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಮಾರಿಸ್‌ ಆರ್‌ಸಿಬಿ ಪರ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next