ನೇಪಿಯರ್: ನ್ಯೂಜಿಲ್ಯಾಂಡ್ ಪ್ರಧಾನಿ ಹುದ್ದೆಯಿಂದ ಜೆಸಿಂಡಾ ಆರ್ಡರ್ನ್ ಅವರು ಕೆಳಕ್ಕಿಳಿಯುವುದಾಗಿ ಘೋಷಿಸಿದ ಬಳಿಕ ಇದೀಗ ಹೊಸ ಪ್ರಧಾನ ಮಂತ್ರಿಯ ನೇಮಕವಾಗಿದೆ. ಲೇಬರ್ ಪಕ್ಷದ ಸಂಸದ ಹಾಗೂ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ನೂತನ ಪ್ರಧಾನಿಯಾಗಲಿದ್ದಾರೆ.
ಕೋವಿಡ್ 19 ಸಂದರ್ಭದಲ್ಲಿ ಹಿಪ್ಕಿನ್ಸ್ ಅವರು ಜವಾಬ್ದಾರಿ ಹೊತ್ತಿದ್ದರು. ಲೇಬರ್ ಪಕ್ಷದಿಂದ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು.
ಇದನ್ನೂ ಓದಿ:ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಲಂಡನ್‌ನಲ್ಲಿ ಪೈಂಟ್ ಅಸ್ತ್ರ!
“ನಾವು ಈ ಆಯ್ಕೆ ಪ್ರಕ್ರಿಯೆಯನ್ನು ಏಕತೆಯೊಂದಿಗೆ ನಡೆಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ನ್ಯೂಜಿಲ್ಯಾಂಡ್ ನ ಜನರ ಸೇವೆಗೆ ನಿಜವಾದ ಬದ್ಧತೆಯನ್ನು ಹೊಂದಿರುವ ಇಂತಹ ಅದ್ಭುತ ಜನರ ಗುಂಪಿನೊಂದಿಗೆ ಕೆಲಸ ಮಾಡಲು ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ” ಎಂದು ಹಿಪ್ಕಿನ್ಸ್ ಹೇಳಿದರು.
ಕಳೆದ ಗುರುವಾರ ಪಿಎಂ ಜೆಸಿಂಡಾ ಆರ್ಡರ್ನ್ ಅವರು ತಾನು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿಯುವುದಾಗಿ ಘೋಷಿಸಿದ್ದರು. ಕಳೆದ ಐದೂವರೆ ವರ್ಷಗಳಿಂದ ಪ್ರಧಾನಿಯಾಗಿದ್ದ 37 ವರ್ಷದ ಜೆಸಿಂಡಾ ಅವರು ಇನ್ನು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.