Advertisement

ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ನಿಂದ ಕ್ರಿಸ್ ಗೇಲ್ ನಿವೃತ್ತಿ 

06:14 AM Feb 18, 2019 | Team Udayavani |

ಜಮೈಕಾ: ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಪ್ರತಿಭೆ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ. ಇದೇ ವರ್ಷದ ಮೇ ಅಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ನಿಂದ ದೂರವಾಗುವುದಾಗಿ ಕ್ರಿಸ್ ಗೇಲ್ ಘೋಷಿಸಿದ್ದಾರೆ.

Advertisement

39 ರ ಹರೆಯದ ಕೆರಿಬಿಯನ್ ಬ್ಯಾಟ್ಸಮನ್, 284 ಏಕದಿನ ಪಂದ್ಯಗಳನ್ನಾಡಿದ್ದಾರೆ. 36.98 ರ ಸರಾಸರಿಯಲ್ಲಿ 9727 ರನ್ ಗಳಿಸಿದ್ದಾರೆ. 23 ಶತಕ ಒಂದು ದ್ವಿಶತಕ ಮತ್ತು 49 ಏಕದಿನ ಅರ್ಧ ಶತಕಗಳು ಗೇಲ್ ಹೆಸರಲ್ಲಿವೆ. 

ಬ್ರಿಯಾನ್ ಲಾರಾ ನಂತರ ವೆಸ್ಟ್ ಇಂಡೀಸ್ ಪರವಾಗಿ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಸಾಧನೆ ಮಾಡಿರುವ ಕ್ರಿಸ್ ಗೇಲ್, ಹತ್ತು ಸಾವಿರ ರನ್ ಮೈಲಿಗಲ್ಲು ತಲುಪಲು 223 ರನ್ ಮಾಡಬೇಕಿದೆ. ವೆಸ್ಟ್ ಇಂಡೀಸ್ ಪರ ಏಕದಿನ ಅತೀ ಹೆಚ್ಚು ಶತಕ ಮತ್ತು ವಿಂಡೀಸ್ ಪರ ಏಕಮಾತ್ರ ದ್ವಿಶತಕ ವೀರ ಎಂಬ ಹೆಗ್ಗಳಿಕೆ ಗೇಲ್ ರದ್ದು.

ಪ್ರವಾಸಿ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಗೆ ಆಯ್ಕೆಯಾಗಿರುವ ಈ ಕೆರಿಬಿಯನ್ ಸ್ಪೋಟಕ ಆಟಗಾರ ಕೊನೆಯ ಬಾರಿಗೆ ತವರಲ್ಲಿ ಏಕದಿನ ಆಡಲಿದ್ದಾರೆ. ವಿದಾಯದ ಬಗ್ಗೆ ಮಾತನಾಡಿದ ಗೇಲ್, ವಿಶ್ವಕಪ್ ಗೆಲ್ಲುವುದು ನನ್ನ ಗುರಿ. ಅದನ್ನು ಸಾಧಿಸಲು ಪ್ರಯತ್ನಿಸುತ್ತೇನೆ ಎಂದರು. 


ನಾನು ವಿಶ್ವದ ಶ್ರೇಷ್ಠ ಆಟಗಾರ. ನಾನೇ ಯುನಿವರ್ಸಲ್ ಬಾಸ್. ಅದು ಯಾವತ್ತಿಗೂ ಬದಲಾಗದು. ಇಂಗ್ಲೆಂಡ್ ತಂಡದಲ್ಲಿ ಆರಂಭಿಕ ಬೌಲರ್ ಯಾರೆಂದು ಗೊತ್ತಿಲ್ಲ. ಯಾರೇ ಆಗಲಿ ಕ್ರಿಸ್ ಗೇಲ್ ಹೆಸರು ಕೇಳಿದರೆ ಅವರ ಎದೆಯಲ್ಲಿ ನಡುಕ ಬರುತ್ತದೆ ಎನ್ನುವುದು ಗೇಲ್ ಅಭಿಪ್ರಾಯ.

ಏಕದಿನ ಕ್ರಿಕೆಟ್ ವಿದಾಯ ನಂತರ ಟಿ-20 ಕ್ರಿಕೆಟ್ ನಲ್ಲಿ ಬಯಕೆ ಹೊಂದಿರುವ ಕ್ರಿಸ್ ಗೇಲ್, 2020ರಲ್ಲಿ ನಡೆಯುವ ಚುಟುಕು ಮಾದರಿ ವಿಶ್ವಕಪ್ ಆಡುವ ಅಭಿಲಾಷೆ ಹೊಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next