Advertisement

ಚೌಡಯ್ಯ ಭಾವಚಿತ್ರ ಮೆರವಣಿಗೆ

12:32 PM Jan 22, 2018 | Team Udayavani |

ಬೀದರ: ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಣೆ ನಿಮಿತ್ತ ಜಿಲ್ಲಾಡಳಿತದಿಂದ
ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Advertisement

ಅಲಂಕೃತ ವಾಹನದಲ್ಲಿ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ಸಿಕ್ಕಿತು. ಮೆರವಣಿಗೆ ಭಗತ್‌ಸಿಂಗ್‌, ಬಸವೇಶ್ವರ ಸರ್ಕಲ್‌, ಅಂಬೇಡ್ಕರ ಸರ್ಕಲ್‌, ಕನ್ನಡಾಂಬೆ ಗೆಳೆಯರ ವೃತ್ತದ ಮಾರ್ಗವಾಗಿ ರಂಗಮಂದಿರಕ್ಕೆ ಬಂದು ಸೇರಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ರಹೀಂ ಖಾನ್‌, ಸಂಸದ ಭಗವಂತ ಖೂಬಾ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮುಖಂಡರಾದ ಶೈಲೇಂದ್ರ ಬೆಲ್ದಾಳೆ, ಚಂದ್ರಾಸಿಂಗ್‌, ಪತ್ರಕರ್ತ ಬಾಬು ವಾಲಿ, ಟೋಕರಿ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಉಪಾಧ್ಯಕ್ಷರಾದ ಸುನೀಲ್‌ ಖಾಶೆಂಪುರ, ಪಾಂಡುರಂಗ ಗುರೂಜಿ, ಶಿವರಾಜ ಜಮಾದಾರ, ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ, ಶಿವಕುಮಾರ  ಶೀಲವಂತ, ಜಿಲ್ಲಾಮಟ್ಟದ ಅ ಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು. ಸರ್ಕಾರಿ, ಅರೇ ಸರ್ಕಾರಿ
ಸಂಘ ಸಂಸ್ಥೆಗಳಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಲಾಯಿತು. ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು. ಬಳಿಕ ಗಣ್ಯರು ಹಾಗೂ ಸಮುದಾಯದ ಬಂಧುಗಳು ಪುಷ್ಪಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next