Advertisement

ಚೌತಿಯಂದೇ ಮರಳಿ ಮನೆ ಸೇರಿದ ಝಾರ್ಖಂಡ್‌ ಮೂಲದ ಮಾನಸಿಕ ಅಸ್ವಸ್ಥ

11:00 AM Aug 27, 2017 | Team Udayavani |

ಕೋಟ: ಕೋಟ ಪರಿಸರದಲ್ಲಿ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ ಝಾರ್ಖಂಡ್‌ನ‌ ಪುರಂದಾಸ್‌ ಎನ್ನುವ ಯುವಕ ಕೋಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗಣೇಶ ಚತುರ್ಥಿಯಂದೇ ಮನೆ ಸೇರುವಂತಾಯಿತು.

Advertisement

ಕೋಟ ಮೂರುಕೈ, ಮಧುವನ ಮುಂತಾದ ಪರಿಸರದಲ್ಲಿ ಅಡ್ಡಾಡುತ್ತಿದ್ದ ಈ ಯುವಕನನ್ನು ಮಧುವನದ ನಿವಾಸಿ ಗುತ್ತಿಗೆದಾರ ಅಬ್ದುಲ್‌ ಅಮೀರ್‌ ಎಂಬವರು ಮಾನವೀಯ ನೆಲೆಯಲ್ಲಿ ತಮ್ಮ ಮನೆಗೆ ಕರೆದೊಯ್ದು, ಸ್ನಾನ ಮಾಡಿಸಿ, ಬಟ್ಟೆಗಳನ್ನು ನೀಡಿ ಪೂರ್ವಾಪರ ವಿಚಾರಿಸಿದ್ದರು. ಆಗ ಆತ, ತನ್ನ ಹೆಸರು ಪುರಂ ದಾಸ್‌. ತಾನು ಝಾರ್ಖಂಡ್‌ನ‌ ಮುರುಗಮs… ನಿವಾಸಿ ಎಂದು ತಿಳಿಸಿದ್ದಾನೆ. ಈತನನ್ನು ಕೋಟ ಠಾಣೆಗೆ ಕರೆದೊಯ್ದ ಅಬ್ದುಲ್‌ಅವರು, ಪೊಲೀಸರಿಗೆ ಮಾಹಿತಿ ನೀಡಿದರು. ಉಪನಿರೀಕ್ಷಕ ಸಂತೋಷ್‌ ಎ. ಕಾಯ್ಕಿಣಿ ಅವರು ದೂರವಾಣಿ ಮೂಲಕ ಝಾರ್ಖಂಡ್‌ನ‌ ಮುರು ಗಾಮs… ಠಾಣೆ ಪೊಲೀಸರನ್ನು ಸಂಪರ್ಕಿಸಿ, ಈತನ ಪೂರ್ವಾಪರ ವಿಚಾರಿಸಿದ್ದರು. ಆತ ಪತ್ನಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಬಂದಿದ್ದ. ಕೆಲವು ಸಮಯ ಮುಂಬಯಿಯಲ್ಲಿ ಕೆಲಸ ಮಾಡಿದ್ದ. ಕೆಲವು ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿ ಊರೂರು ಅಡ್ಡಾಡುತ್ತ ಕೋಟಕ್ಕೆಬಂದಿದ್ದ ಎನ್ನುವುದು ತಿಳಿದು ಬಂತು.

ಬಳಿಕ ಮನೆಯವರ ಮನವೊಲಿಸಿ, ಕರೆದೊಯ್ಯುವಂತೆ ತಿಳಿಸಲಾಯಿತು.ಈತನ ಸಂಬಂಧಿಕರಾದ ಸಂದೀಪ ಕುಮಾರ್‌ ದಾಸ್‌ ಹಾಗೂ ಕಿಶೋರ್‌ ಕುಮಾರ್‌ ದಾಸ್‌ ಶುಕ್ರವಾರ ಕೋಟ ಪೊಲೀಸ್‌ ಠಾಣೆಗೆ ಆಗಮಿಸಿ, ದಾಖಲೆಗಳನ್ನು ಸಲ್ಲಿಸಿ, ಪುರಂ ದಾಸ್‌ನನ್ನು ತಮ್ಮೂರಿಗೆ ಕರೆದೊಯ್ದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next