Advertisement

ಅವಲಕ್ಕಿಯಿಂದ ಗರಿ ಗರಿಯಾದ ಚೌಚೌ

10:33 PM Nov 22, 2019 | mahesh |

ಬೇಕಾಗುವ ಸಾಮಗ್ರಿಗಳು
ಎಣ್ಣೆ -ಸ್ವಲ್ಪ
3 ಕಪ್‌ ದಪ್ಪ ಅವಲಕ್ಕಿ
ಶೇಂಗಾ ಬೀಜ-ಅರ್ಧ ಕಪ್‌
ಬಾದಾಮಿ ಬೀಜ-ಕಾಲು ಕಪ್‌
ಗೋಡಂಬಿ-ಕಾಲು ಕಪ್‌
ಕಡಲೆ ಬೇಳೆ-2 ದೊಡ್ಡ ಚಮಚ
ಕರಿಬೇವಿನ ಎಲೆ-4 ಎಸಳು
ಅರಶಿನ ಪುಡಿ-ಕಾಲು ಚಮಚ
ಮೆಣಸಿನ ಹುಡಿ-ಅರ್ಧ ಚಮಚ
ಪುಡಿಮಾಡಿರುವ ಸಕ್ಕರೆ-3 ಕಪ್‌
ಉಪ್ಪು ರುಚಿಗೆ ತಕ್ಕಷ್ಟು

Advertisement

ಒಂದು ದೊಡ್ಡ ಬಾಣಲೆಗೆ ಎಣ್ಣೆ ಹಾಕಿಕೊಳ್ಳಬೇಕು. ರಂಧ್ರಗಳಿರುವ ಅರೆಪು ಚಮಚ ತೆಗೆದುಕೊಂಡು ಅದಕ್ಕೆ ಅವಲಕ್ಕಿ ಹಾಕಿ ಆ ಚಮಚವನ್ನು ಎಣ್ಣೆಯಲ್ಲಿ ಮುಳುಗಿಸಿ ಮೇಲಿನಿಂದ ಅವಲಕ್ಕಿಯನ್ನು ಗರಿಗರಿಯಾಗುವ ತನಕ ಹುರಿದುಕೊಳ್ಳಬೇಕು. ಕರಿದ ಅವಲಕ್ಕಿಯನ್ನು ಪ್ಲೇಟ್‌ವೊಂದರಲ್ಲಿ ಹಾಕಿಟ್ಟುಕೊಳ್ಳಬೇಕು. ಬಳಿಕ ಅದೇ ಎಣ್ಣೆಯಲ್ಲಿ ಅರ್ಧ ಕಪ್‌ ಶೇಂಗಾ ಬೀಜ ಹಾಕಿ ಕೆಂಪಾಗುವ ತನಕ ಹುರಿದುಕೊಳ್ಳ ಬೇಕು. ಅದೇ ರೀತಿ ಕಾಲು ಕಪ್‌ ಬಾದಾಮಿ ಬೀಜ, ಕಾಲು ಕಪ್‌ ಗೋಡಂಬಿ, 2 ದೊಡ್ಡ ಚಮಚ ಕಡಲೆ ಬೇಳೆಯನ್ನು ಕರಿದುಕೊಳ್ಳಬೇಕು. ಅನಂತರ 4 ಎಸಳು ಕರಿಬೇವಿನ ಎಲೆಯನ್ನೂ ಕರಿದುಕೊಳ್ಳಬೇಕು.

ಬಳಿಕ ಹುರಿದಿಟ್ಟ ಅವಲಕ್ಕಿಗೆ ಕಾಲು ಚಮಚ ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಮೆಣಸಿನ ಹುಡಿ, ಪುಡಿ ಮಾಡಿರುವ ಸಕ್ಕರೆ 3 ಚಮಚ ಹಾಕಿ ಹುರಿದಿರುವ ಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಶೇಂಗಾ ಬೀಜ, ಕಡಲೇಬೇಳೆ, ಬಾದಾಮಿ, ಗೋಡಂಬಿಯನ್ನು ಹಾಕಿ ಅರ್ಧ ಕಪ್‌ ದಪ್ಪ ಸೇವು ಹಾಕಿ ಮಿಕ್ಸ್‌ ಮಾಡಿ. ದೊಡ್ಡ ಭರಣಿಯಲ್ಲಿ ಹಾಕಿ ಗಾಳಿಯಾಡದ ಜಾಗದಲ್ಲಿ ಇಡಿ. 20 ದಿನಗಳ ಕಾಲ ಬಳಕೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next