Advertisement
ಅಷ್ಟೇ ಅಲ್ಲ, ಚುನಾವಣೆ ಭಾಷಣಗಳಲ್ಲಿ ಇಂತಹ ಹೇಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ಶಬ್ದವನ್ನು ಬಳಸಿಲ್ಲ. ಚುನಾವಣ ಪ್ರಚಾರ ನಡೆಸುವ ಭರದಲ್ಲಿ ಈ ಹೇಳಿಕೆ ಹೊರಬಂದಿದೆ ಎಂದು ರಾಹುಲ್ ತಪ್ಪೊಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ರಾಹುಲ್ ವಿರುದ್ಧ ದೂರು ಸಲ್ಲಿಸಿದ್ದರು. ಅಲ್ಲದೆ, ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಕೋರ್ಟ್ ತೀರ್ಪಿನಲ್ಲಿ ಚೌಕಿದಾರ ಚೋರ್ ಎಂಬುದಾಗಿ ಉಲ್ಲೇಖೀಸಿಲ್ಲ ಎಂದಿತ್ತು.
ಒಂದೆಡೆ ಚೌಕಿದಾರ್ ಚೋರ್ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿಲ್ಲ ಎಂಬುದಾಗಿ ಅಫಿದವಿತ್ ಸಲ್ಲಿಸುತ್ತಿದ್ದಂತೆಯೇ ಟ್ವೀಟ್ ಮಾಡಿದ ರಾಹುಲ್, ಕಮಲದ ಬ್ರಾಂಡ್‌ನ ಚೌಕಿದಾರ ಕಳ್ಳನೇ ಹೌದು ಎಂಬುದನ್ನು ಮೇ 23ರಂದು ಜನರ ನ್ಯಾಯಾಲಯ ನಿರ್ಧರಿಸುತ್ತದೆ. ಅಂದು ನ್ಯಾಯ ಸಿಗುತ್ತದೆ. ಬಡವರಿಂದ ಲೂಟಿ ಮಾಡಿ ತನ್ನ ಶ್ರೀಮಂತ ಸ್ನೇಹಿತರಿಗೆ ಲಾಭ ಮಾಡಿಕೊಟ್ಟ ಚೌಕಿದಾರನಿಗೆ ಶಿಕ್ಷೆ ಕೊಡುತ್ತದೆ ಎಂದಿದ್ದಾರೆ.
Related Articles
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ರಾಹುಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ರಾಹುಲ್ ಮೊದಲ ಕ್ರಮಾಂಕದ ಸುಳ್ಳುಗಾರ. ರಫೇಲ್ ಒಪ್ಪಂದದಲ್ಲಿ ಮೋದಿ ವಿರುದ್ಧ ನಾನು ಸುಳ್ಳು ಹೇಳಿದ್ದೇನೆ ಎಂಬುದನ್ನು ರಾಹುಲ್ ಈಗ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ವಕ್ತಾರ ನರಸಿಂಹರಾವ್ ಹೇಳಿದ್ದಾರೆ.
Advertisement