Advertisement

Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಪ್ರಶಸ್ತಿ ರದ್ದು!

10:12 AM Oct 07, 2024 | Team Udayavani |

ನವದೆಹಲಿ: ಸಹ ನೃತ್ಯ ನಿರ್ದೇಶಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ನೃತ್ಯ  ನಿರ್ದೇಶಕ ಜಾನಿ ಮಾಸ್ಟರ್‌ಗೆ ನೀಡಲಾಗಿದ್ದ ಅತ್ಯುತ್ತಮ ನೃತ್ಯ ನಿರ್ದೇಶಕ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಹಿಂಪಡೆಯಲಾಗಿದೆ.

Advertisement

ಅವರ ವಿರುದ್ಧ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅ.8 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯ ಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಜಾನಿಗೆ ಧನುಷ್‌ ನಟ ನೆಯ ʼತಿರುಚಿತ್ರಾಂಬಲಮ್‌ʼ ಸಿನಿಮಾದ ನೃತ್ಯ ನಿರ್ದೇಶನಕ್ಕೆ ಪ್ರಶಸ್ತಿ ಲಭಿಸಿತ್ತು. ಜಾನಿ ಮಾಸ್ಟರ್‌ ವಿರುದ್ಧ ಪೋಸ್ಕೋ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next