Advertisement

ಥಾಣೆ ರೈಲು ಹಳಿ ಬಳಿ ಮಗುವಿನ ದೇಹದ ತುಂಡುಗಳು ಪತ್ತೆ

06:46 AM Feb 18, 2019 | Team Udayavani |

ಥಾಣೆ : ಮಗುವೊಂದರ ತುಂಡು ಮಾಡಲ್ಪಟ್ಟ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಇಲ್ಲಿನ ರೈಲ್ವೇ ಟ್ರ್ಯಾಕ್‌ ಬಳಿ ಪತ್ತೆಯಾಗಿವೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ತಿತ್ವಾಲಾ ಪ್ರದೇಶ ಸಮೀಪ ರೈಲು ಹಳಿಯ ಪಕ್ಕದಲ್ಲಿರುವ ಪೊದೆಯೊಂದರ ಬಳಿ ಮಗುವಿನ ತುಂಡರಿಸಲ್ಪಟ್ಟ ದೇಹದ ಭಾಗಗಳು ಕಂಡು ಬಂದುದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ ಪ್ರಕಾರ ಕಲ್ಯಾಣ್‌ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ದೇಹದ ಭಾಗಗಳನ್ನು ಸಂಗ್ರಹಿಸಿ ವಶಕ್ಕೆ ತೆಗೆದುಕೊಂಡರು. 

ಮಗುವಿನ ಗುರುತು ಪತ್ತೆ ಹಚ್ಚುವ ಕೆಲಸ ನಡೆದಿದೆ; ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next