Advertisement
ಮರದ ಸೇತುವೆಗೆ ಮುಕ್ತಿಚೋನಮನೆಯ ಶ್ರೀ ಶನೈಶ್ಚರ ದೇವಸ್ಥಾನಕ್ಕೆ ರಾಜ್ಯದ ಹಾಗೂ ಪರಿಸರದ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ದೂರದ ಊರುಗಳಿಗೆ ತೆರಳಲು ಇಲ್ಲಿನ ಕುಬಾj ನದಿಯನ್ನು ದಾಟಿ ಹೋಗಬೇಕಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಕುಬಾj ನದಿಗೆ ಚೋನಮನೆಯಲ್ಲಿ ಶ್ರೀ ಶನೈಶ್ಚರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಶೋಕ ಶೆಟ್ಟಿ ಹಾಗೂ ಪರಿಸರದವರು ಸೇರಿಕೊಂಡು ತಾತ್ಕಾಲಿಕ ಮರದ ಸೇತುವೆ ಯನ್ನು ನಿರ್ಮಿಸುತ್ತಾ ಬಂದಿದ್ದರು. ಇಲ್ಲಿನ ಜನರು, ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಅಡಿಕೆ ಮರದಿಂದ ನಿರ್ಮಾಣ ಮಾಡಲಾದ ಮರದ ಸೇತುವೆಯನ್ನೆ ಅವಲಂಬಿಸಿದ್ದರು.
ಚೋನಮನೆ ಪರಿಸರ ದಟ್ಟಾರಣ್ಯದಿಂದ ಕೂಡಿದೆ. ಇಲ್ಲಿ ಮಳೆಗಾಲದಲ್ಲಿ ಕುಬಾj ನದಿ ತುಂಬಿ ಹರಿಯುತ್ತದೆ. ಕೃಷಿ ಹಾಗೂ ಕೂಲಿ ಕೆಲಸವೇ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಪರಿಸರದ ಚೋನಮನೆ ಶ್ರೀ ಶನೈಶ್ಚರ ದೇವಸ್ಥಾನ ಈ ಭಾಗದಲ್ಲಿ ತನ್ನದೇ ಆದ ಶಕ್ತಿ ಕೇಂದ್ರವಾಗಿ ಮೂಡಿಬಂದಿದೆ. ಮಳೆಗಾಲದಲ್ಲಿ ಆಜ್ರಿ ಹಾಗೂ ಕಮಲಶಿಲೆ ಗ್ರಾಮಗಳ ನಡುವೆ ದಟ್ಟ ಅರಣ್ಯದೊಳಗೆ ಮೈದುಂಬಿ ಹರಿಯುವ ಕುಬಾj ನದಿಯನ್ನು ದಾಟಿ ದಿನ ನಿತ್ಯದ ಬದುಕನ್ನು ಕಂಡುಕೊಂಡ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ದೊರಕಿದೆ.
Related Articles
Advertisement
ಆಜ್ರಿ, ಚೋನಮನೆ ಹಾಗೂ ಪರಿಸರದ ಜನರ ಬಹು ದಿನಗಳ ಬೇಡಿಕೆ ಹಾಗೂ ಅವರು ಸಂಪರ್ಕಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ರೂ.159.50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆಗೆ ಹೊಂದಿಕೊಂಡಂತೆ ಇರುವ ಸಂಪರ್ಕ ರಸ್ತೆ ಪೂರ್ಣಗೊಳಸಿ ಮುಂದಿನ ವಾರದಲ್ಲಿ ಉದ್ಘಾಟಿಸಲಾಗುವುದು.– ಕೆ. ಗೊಪಾಲ ಪೂಜಾರಿ, ಬೈಂದೂರು ಕ್ಷೇತ್ರದ ಶಾಸಕ ಈ ಹಿಂದೆ ಚೋನಮನೆಯಲ್ಲಿ ತುಂಬಿ ಹರಿಯುವ ಕುಬಾj ನದಿಗೆ ಅಡ್ಡಲಾಗಿ ಸ್ಥಳೀಯರ ಸಹಕಾರದೊಂದಿಗೆ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಹಲವಾರು ವರ್ಷಗಳಿಂದ ಸ್ಥಳೀಯರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಈಗ ಸೇತುವೆಯ ಕನಸು ನನಸಾಗಿದೆ. ಇದರಿಂದಾಗಿ ಆಜ್ರಿ ಮೂಲಕ ಕಮಲಶಿಲೆಗೆ ತೆರಳುವವರಿಗೆ ಹಾಗೂ ಶ್ರೀ ಕ್ಷೇತ್ರ ಚೋನಮನೆಗೆ ಬರುವ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾಗಿದೆ.
– ಅಶೋಕ ಶೆಟ್ಟಿ, ಶ್ರೀ ಶನೈಶ್ಚರ ದೇವಸ್ಥಾನ ಚೋನಮನೆಯ ಧರ್ಮದರ್ಶಿ – ಉದಯ ಆಚಾರ್ ಸಾಸ್ತಾನ