Advertisement

ಚೋಳರಿಂದ ಸನಾತನ ಧರ್ಮ ಪಾಲನೆ: ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ

09:02 PM Oct 07, 2022 | Team Udayavani |

ಚೆನ್ನೈ: ಚೋಳ ರಾಜನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಎನ್ನುವ ನಟ ಕಮಲ ಹಾಸನ್‌ ಮಾತಿಗೆ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ ತಿರುಗೇಟು ಕೊಟ್ಟಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಚೋಳರ ಕಾಲದಲ್ಲಿ ಹಿಂದೂ ಎನ್ನುವ ಪದ ಇರದೇ ಇರಬಹುದು. ಆದರೆ ತಮಿಳರು ಸನಾತನ ಧರ್ಮವನ್ನು ಪಾಲಿಸುತ್ತಿದ್ದವರು. ಚೋಳರು ಶಿವ, ವಿಷ್ಣು ಮತ್ತು ದುರ್ಗೆಯನ್ನು ಪೂಜಿಸಿದವರು. ಬೇರೆ ರಾಷ್ಟ್ರಗಳಿಗೂ ಸನಾತನ ಧರ್ಮವನ್ನು ಹರಡಿಸುವ ಯತ್ನ ಮಾಡಿದವರು’ ಎಂದು ಹೇಳಿದ್ದಾರೆ.

ಇದೇ ವಿಚಾರದಲ್ಲಿ ತೆಲಂಗಾಣ ರಾಜ್ಯಪಾಲೆ ತಮಿಳ್‌ಸೈ ಸುಂದರರಾಜನ್‌ ಪ್ರತಿಕ್ರಿಯೆ ನೀಡಿ, “ನಾನು ತಂಜಾವೂರಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾದ ಬೃಹದೇಶ್ವರ ದೇಗುಲದ ಬಳಿ ಬೆಳೆದವಳು. ಹಿಂದೂ ಧರ್ಮದ ಸಾಂಸ್ಕೃತಿಕ ಗುರುತನ್ನು ಮರೆ ಮಾಚುವ ಪ್ರಯತ್ನಗಳು ನಡೆಯುತ್ತಿವೆ. ಇದರ ವಿರುದ್ಧ ತಮಿಳರು ಧ್ವನಿ ಎತ್ತಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next