ಬೆಂಗಳೂರು: ಸುಬ್ರಾಯ ಚೊಕ್ಕಾಡಿ ಅವರ ಸಾಹಿತ್ಯ ಎಲ್ಲ ಕಾಲಕ್ಕೂ ಬೆರಗು ಮತ್ತು ವಿಸ್ಮಯ ಹುಟ್ಟಿಸುವಂತಹದ್ದಾಗಿದೆ. ಅವರ ಕಾವ್ಯಗಳನ್ನುಎಷ್ಟು ಸಲ ಓದಿದರೂ ಇನ್ನೂ ಏನೋ ಇದೆಎಂದೆನಿಸುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ತಿಳಿಸಿದರು.
ವಿಕಾಸ ಪ್ರಕಾಶನ ಭಾನುವಾರ ಕಸಾಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭನ ಕಥನ “ಕಾಲದೊಂದೊಂದೇ ಹನಿ..’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈಗಾಗಲೇ ಬೇರೆ ಬೇರೆ ನಿಲುವಿನಲ್ಲಿಅನುಭವ ಕಥನಗಳು ಬಂದಿವೆ. ಆದರೆ ಸುಬ್ರಾ ಯ ಚೊಕ್ಕಾಡಿ ಅವರ “ಕಾಲದೊಂದೊಂದೇ ಹನಿ..’ ಕೃತಿ ತುಂಬಾ ವಿಶಿಷ್ಟ ಮತ್ತು ಭಿನ್ನನೆಲೆಯಲ್ಲಿ ಮೂಡಿ ಬಂದಿದೆ. ಅವರ ಜೀವನದಭಿನ್ನ ನೆಲೆಗಳ ಒಂದೊಂದು ಹನಿಯನ್ನು ಕೂಡಿಸಿ ಪೊಣಿಸಿದಂತೆ ಈ ಅನುಭನ ಕಥನ ಹೆಣೆಯಲಾಗಿದೆ ಎಂದರು.
ಚೊಕ್ಕಾಡಿ ಅವರು ಶಿಕ್ಷಕರಾಗಿ ಮತ್ತು ಸಾಹಿತಿಗಳಾಗಿ ನಮಗೆ ಗೊತ್ತು. ಆದರೆ ಈ ಕಥನದಲ್ಲಿ ಅವರೊಬ್ಬ ಅತ್ಯುತ್ತಮ ಕೃಷಿಕಎಂಬುವುದೂ ತಿಳಿಯುತ್ತದೆ. ಹಾಗೆಯೇ ಮನೆಯ ಹಿರಿಯಣ್ಣನ ನೋವಿನಗಾಥೆ ಕೂಡ ಪರಿಚಯವಾಗುತ್ತದೆ. ಹೊಲ ಉಳುಮೆ ಮಾಡುತ್ತಾ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿರುವುದು ಚೊಕ್ಕಾಡಿ ಅವರೊಳಗಿನಸಾಹಿತ್ಯದ ಸೆಳೆತ ತೋರಿಸುತ್ತದೆ ಎಂದರು.ಸಾಹಿತಿ ಸುಬ್ರಾಯ ಚೊಕ್ಕಾಡಿ ಮಾತನಾಡಿ,ನನ್ನ ಅನುಭವ ಕಥನ ಪುಸ್ತಕ ರೂಪದಲ್ಲಿ ಬರುತ್ತದೆ ಎಂದು ತಿಳಿದು ಕೊಂಡಿರಲಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ವಾಟ್ಸ್ ಆ್ಯಪ್‌ಗ್ರೂಪ್‌ನಲ್ಲಿ ನಾನು ನನ್ನ ಅನುಭನಗಳನ್ನುದಾಖಲು ಮಾಡುತ್ತಿದ್ದೆ. ಅದು ನಂತರದಿನಗಳಲ್ಲಿ ಪುಸ್ತಕ ರೂಪದಲ್ಲಿ ಬರಲು ಕಾರಣವಾಯಿತು ಎಂದರು.
ವಿಮರ್ಶಕ ಎಸ್.ಆರ್.ವಿಜಯಶಂಕರ್ ಮಾತನಾಡಿದರು. ಲೇಖಕ ಡಾ.ನಾ.ದಾಮೋದರ ಶೆಟ್ಟಿ, ಹಿರಿಯ ಪತ್ರಕರ್ತರಾದ ಡಾ.ಆರ್.ಪೂರ್ಣಿಮಾ, ಜೋಗಿ, ಕೃತಿಯ ನಿರೂಪಕಿ ಅಂಜನಾ ಹೆಗಡೆ ಇತರರಿದ್ದರು.