Advertisement

ಸಾವಿರಾರು ಪೇಪರ್‌ ಮಿಂಟ್‌ ರಸ್ತೆಗೆ !

02:45 PM Jul 14, 2021 | Team Udayavani |

ಶಿರಸಿ: ತಾಲೂಕಿನ ಹೂಡ್ಲಮನೆ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಸಾವಿರಾರು ಸಂಖ್ಯೆಯಲ್ಲಿ ಅವಧಿ ಮುಗಿದ ಕ್ಯಾಂಡಿ ಹೀಪ್‌ ಪೇಪರ್‌ಮಿಂಟ್‌ ಚೆಲ್ಲಿದ್ದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ಯಾವ ಮಗು ನೋಡಿದರೂ ತನಗೆ ಸಾಧ್ಯವಾದಷ್ಟು ಬಾಚಿಕೊಳ್ಳಬಹುದು ಎಂಬಷ್ಟಿದ್ದು ಸುಮಾರು ಟ್ರ್ಯಾಕ್ಟರನಷ್ಟು ಚೆಲ್ಲಲಾಗಿದೆ. ಪೇಪರ್‌ ಮಿಂಟ್ಸ ಜೊತೆ ಸೋನ್‌ ಪಪ್ಪಡಿ ಇತ್ಯಾದಿಗಳನ್ನು ಯಾವುದೇ ಕಾಳಜಿ ಇಲ್ಲದೆ ತಂದು ಸುಂದರ ಪರಿಸರದಲ್ಲಿ ಎಸೆದಿದ್ದಾರೆ.

ಬೆಳಗಿನಿಂದ ಒಂದಷ್ಟು ಮಕ್ಕಳೂ ತಿಂದಿದ್ದಾರೆ ಎಂದೂ ಕೆಲವರು ಹೇಳಿದ್ದಾರೆ ಎಂದು ಉದ್ಯಮಿ ಮನು ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಎಷ್ಟು ಜಾನುವಾರುಗಳು ತಿನ್ನುತ್ತವೊ ಗೊತ್ತಿಲ್ಲ! :  ಡೇಟ್‌ ಬಾರ್‌ ಆದ ಈ ಕಸ ವಿಲೇವಾರಿಗೆ ಬೇರಾವ ಅವಕಾಶವಿಲ್ಲದಾಯಿತೇ? ಇನ್ನು ಪಕ್ಕದಲ್ಲೇ ಇರುವ ಕಲ್ಗಾರ್‌ ಹೊಳೆಗೆ ಸೇರಿ ಆಗುವ ಅವಾಂತರ ಬೇರೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next