Advertisement
ಚಾರ್ಮಾಡಿ, ಮುಂಡಾಜೆ, ಲಾೖಲ, ಇಂದಬೆಟ್ಟು ಪ್ರದೇಶಗಳ 48 ಬಾವಿಗಳ ನೀರನ್ನು ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಲುಷಿತಗೊಂಡ ಬಾವಿ ನೀರು ಸ್ಯಾಂಪಲ್ ಪಡೆದು 24 ಗಂಟೆ ಒಳಗಾಗಿ ಬಳಕೆಗೆ ಯೋಗ್ಯ ಇರುವ ಕುರಿತು ವರದಿ ನೀಡಲಾಗುತ್ತಿದೆ.
ನೆರೆಗೆ ತುತ್ತಾದ ಪ್ರದೇಶಗಳಲ್ಲಿ ನಿರಂತರ ಫಾಗಿಂಗ್ ಸಹಿತ ನೀರಿನ ಸ್ಯಾಂಪಲ್ ಜಾಗೃತಿ ಮೂಡಿಸಲು 70 ಆಶಾ ಕಾರ್ಯಕರ್ತೆಯರು, 5 ಮಂದಿ ಕಿ.ಆ. ಸಹಾಯಕಿಯರು, 5 ಕಿ.ಆ. ಸಹಾಯಕರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಚಾರ್ಮಾಡಿ, ಮುಂಡಾಜೆ, ಲಾೖಲ, ಇಂದಬೆಟ್ಟು ಪ್ರದೇಶದ 48 ಬಾವಿಗಳಿಗೆ ಕ್ಲೊರಿನೇಶನ್ ಮಾಡಲಾಗಿದೆ. ಶೇ. 90 ಬಳ ಕೆಗೆ ಯೋಗ್ಯವಲ್ಲದ ಬಾವಿಗಳಿದ್ದು, ಕೆಸರಿರುವ ಬಾವಿ ಸಂಪೂರ್ಣ ಸ್ವಚ್ಛತೆಗೆ ಸ್ಥಳೀಯ ಗ್ರಾ.ಪಂ. ಪಿಡಿಒಗಳಿಗೆ, ಮನೆ ಮಂದಿಗೆ ಆಧಿಕಾರಿಗಳು ಸೂಚಿಸಿದ್ದಾರೆ. ಪರೀಕ್ಷೆಗೊಳಪಡಿಸಿದಾಗ ನೀರು ಕಪ್ಪು ಬಣ್ಣಕ್ಕೆ ತಿರುಗಿದರೆ 2ನೇ ಬಾರಿಗೆ ಬಾವಿಯನ್ನು ಸೂಪರ್ ಕ್ಲೋರಿನೇಶನ್‌ಗೆಒಳಪಡಿಸಬೇಕಾಗುತ್ತದೆ ಎಂದರು.
Related Articles
ಈಗಾಗಲೇ 48 ಬಾವಿಗಳ ಪೈಕಿ 25 ಬಾವಿಗಳು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದ್ದು, ಈ ಬಾವಿಗಳಿಗೆ ಸೂಪರ್ ಕ್ಲೋರಿನೇಶನ್ ಅವಶ್ಯವಾಗಿದೆ. ಒಂದು ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಲು 2.5 ಗ್ರಾಂ. (ಶೇ. 30 ಸಾಂದ್ರತೆಯುಳ್ಳ) ಬ್ಲೀಚಿಂಗ್ ಪೌಡರ್ ಅವಶ್ಯವಿರುತ್ತದೆ. ಸೂಪರ್ ಕ್ಲೋರಿನೇಶನ್‌ಗೆ 5 ಗ್ರಾಂ. ಬಳಸಿ ನೀರನ್ನು ಶುದ್ಧಪಡಿಸುವ ಅವಶ್ಯವಿದೆ. ಬಹುತೇಕ ಬಾವಿಗಳು ಹೂಳು ತುಂಬಿ ಕೆಟ್ಟು ಹೋಗಿವೆ. ಕೆಸರು ನೀರು ತುಂಬಿದ ಬಾವಿಗಳ ಸ್ಯಾಂಪಲ್ ಪಡೆಯಲಾಗುತ್ತಿದ್ದು, ನೀರು ಸಂಪೂರ್ಣ ಆವಿ ಮಾಡಿ ಬಳಕೆಗೆ ಯೋಗ್ಯವಿರುವ ಕುರಿತು ವರದಿ ನೀಡಿದ ಬಳಿಕವಷ್ಟೇ ಮನೆಮಂದಿ ಬಳಸಲು ಸೂಚನೆ ನೀಡಲಾಗಿದೆ.
Advertisement
ನೆರೆ ಪ್ರದೇಶದ ಮನೆ ಮಂದಿ ಯಾವುದೇ ಕಾರಣಕ್ಕೂ ಬಾವಿ ನೀರು ಬಳಸದಂತೆಯೂ ನೀರಿನ ಆವಶ್ಯಕತೆಗೆ ಪಂ.ಗೆ ತಿಳಿಸಿದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಿದೆ.
ಅವಶ್ಯ ಕ್ರಮ
ಸಾಂಕ್ರಾಮಿಕ ರೋಗ ತಡೆಗೆ ಅವಶ್ಯ ಕ್ರಮ ವಹಿಸಲಾಗುತ್ತಿದೆ. ಜನರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ನೆರೆ ಪ್ರದೇಶದಲ್ಲಿ ಕಲುಷಿತ ನೀರು ನಿಂತಲ್ಲಿ ಡೆಂಗ್ಯೂ ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ಪರಿಸರ ಸ್ವಚ್ಛವಾಗಿಡಲು ಸಹಕರಿಸಬೇಕಾಗಿದೆ. ಸೊಳ್ಳೆ ಇದ್ದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗುವುದು.
– ಡಾ| ಕಲಾಮಧು
ತಾಲೂಕು ಆರೋಗ್ಯಾಧಿಕಾರಿ
ಬಾವಿಗಳ ನೀರಿನ ಸ್ಯಾಂಪಲ್
ಕಲುಷಿತಗೊಂಡ ಪ್ರತಿ ಬಾವಿಗಳ ಕ್ಲೋರಿನೇಶನ್ ಅವಶ್ಯವಾಗಿದ್ದು, ಈಗಾಗಲೇನಾಲ್ಕು ಪ್ರದೇಶಗಳ 48 ಬಾವಿಗಳ ನೀರಿನ ಸ್ಯಾಂಪಲ್ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಅನಾರು, ಮಿತ್ತಬಾಗಿಲು, ಮಲವಂತಿಗೆ, ಉಜಿರೆ, ಕೊಲ್ಲಿ ಪ್ರದೇಶದ ಬಾವಿ ಪರಿಶೀಲಿಸಲಾಗುತ್ತದೆ.
– ಗಿರೀಶ್, ಹೆಲ್ತ್ ಇನ್‌ಸ್ಪೆಕ್ಟರ್
-ಚೈತ್ರೇಶ್ ಇಳಂತಿಲ