Advertisement

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

03:21 PM Jun 24, 2024 | Team Udayavani |

ಚಿತ್ತಾಪುರ: ತಾಲೂಕಿನ ಯಾಗಾಪುರ, ಬೆಳಗೇರಾ ಗ್ರಾಮಗಳ ನಡುವಿನ ಅರಣ್ಯದಲ್ಲಿ ಚಿರತೆಯೊಂದು ದಾಳಿ ಮಾಡಿ ಮಲ್ಲಪ್ಪ ಮಪಟ್ಟಲ್ಲಿ ಎಂಬವರ ಹೋರಿಗೆ ಗಾಯವಾದ ಘಟನೆ ಜರುಗಿದೆ.

Advertisement

ಮೇಯಿಸಲು ಗುಡ್ಡದ ಸಮೀಪ ದನಕರು, ಹೋರಿ ಮೇಯಿಸಲು ಹೋದಾಗ ಚಿರತೆ ದಾಳಿ ಮಾಡಿದ್ದು, ಅದನ್ನು ಗಮನಿಸಿದ ದನಗಾಹಿಗಳು ಜೋರಾಗಿ ಚೀರಾಡಿದ್ದರಿಂದ ಭಯಗೊಂಡ ಚಿರತೆಯು ಹೋರಿ ಬಿಟ್ಟು ಓಡಿ ಹೋಗಿದೆ. ಹೋರಿಯ ಕತ್ತಿನ ಭಾಗದಲ್ಲಿ ಗಾಯಗಳಾಗಿದ್ದು, ಪಶು ಸಂಗೋಪನೆ ಇಲಾಖೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಚಿರತೆಯು ಬೆಳಗೇರಾ ಗ್ರಾಮಗಳ ಸಮೀಪದ ಗುಡ್ಡದಲ್ಲಿ ಓಡಾಡುತ್ತಿದ್ದು, ಆಹಾರ ಅರಸಿಕೊಂಡು ಗುಡ್ಡದಿಂದ ಹೊರಗೆ ಬಂದ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಎಳೆದುಕೊಂಡು ಹೋಗುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿದು ಜನರು, ರೈತರು ಹಾಗೂ ದನಗಾಹಿಗಳಿಗೆ ಕಾಡುತ್ತಿರುವ ಭಯ, ಆತಂಕ ನಿವಾರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next