Advertisement

ಚಿತ್ತಾಪುರ ಪುರಸಭೆ ನಿರ್ಣಯ ಕಾರ್ಯರೂಪಕ್ಕಿಲ್ಲ

10:11 AM Aug 31, 2022 | Team Udayavani |

ಚಿತ್ತಾಪುರ: ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ ಕೆಲಸಗಳು ಜಾರಿಯಾಗುತ್ತಿಲ್ಲ. ಸಭೆ ನಡೆಸಿ ಏನು ಉಪಯೋಗ ಎಂದು ಪ್ರತಿಪಕ್ಷದ ನಾಯಕ ನಾಗರಾಜ ಭಂಕಲಗಿ ಪ್ರಶ್ನಿಸಿದರು.

Advertisement

ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಸಭೆ ಮೂರು ತಿಂಗಳಿಗೊಮ್ಮೆ ನಡೆಯುತ್ತವೆ. ಸಭೆಯಲ್ಲಿ ಚರ್ಚಿಸಿದ ಯಾವುದೇ ವಿಷಯಗಳು, ಕೆಲಸಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಸಾಮಾನ್ಯ ಸಭೆಯಲ್ಲಿ ನಿರ್ಣಯ ವಾದ ವಿಷಯಗಳನ್ನು ಅಧಿಕಾರಿಗಳು ಅಧ್ಯಕ್ಷರ ಗಮನಕ್ಕೆ ತಂದು ಸಂಬಂಧಪಟ್ಟ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿ ಕೆಲಸ ಕಾರ್ಯ ಕೈಗೊಳ್ಳಬೇಕು ಎಂದರು.

ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆಯಿಲ್ಲ. ನಿಯೋಜನೆಗೊಂಡ ಎಂಜಿನಿಯರ್‌ ಹಾಗೂ ಸಿಬ್ಬಂದಿಯನ್ನು ವರ್ಗ ಮಾಡಿ ಕಾಯಂ ಸಿಬ್ಬಂದಿಗಳಿಗಾಗಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಆಶ್ರಯ ಯೋಜನೆಯಡಿ ಮನೆಗಳ ಫಲಾನುಭಿಗಳಿಗೆ 3 ಲಕ್ಷ ಬದಲು 1.20 ಲಕ್ಷ ರೂ. ನೀಡಲಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ತೊಂದರೆ ಯಾಗುತ್ತಿದೆ. ಕೊಡುವುದಾದರೆ 3.35ಲಕ್ಷ ರೂ. ಅನುದಾನ ನೀಡಿ ಇಲ್ಲವೇ ಫಲಾನುಭವಿಗಳ ಹೆಸರು ವಾಪಸ್ಸು ಪಡೆಯಿರಿ ಎಂದು ಎಚ್ಚರಿಕೆ ನೀಡಿದರು.

ಟೆಂಡರ್‌ ಕೆಲಸಗಳು ವಿಳಂಬವಾಗು ತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು. ಸದಸ್ಯ ಚಂದ್ರಶೇಖರ ಕಾಶಿ ಮಾತನಾಡಿ, ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸದಸ್ಯ ರಮೇಶ ಬೊಮ್ಮನಳ್ಳಿ ಮಾತನಾಡಿ, ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದು ಆಪಾದಿಸಿದರು. ಸದಸ್ಯೆ ಶೀಲಾ ಕಾಶಿ ಮಾತನಾಡಿ, ಜನತೆ ಪ್ರಶ್ನಿಸುವ ಮೊದಲು ಸಮಗ್ರ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು.

ಸದಸ್ಯ ಶಾಮ ಮೇಧಾ ಮಾತನಾಡಿ, ಮೀನು ಮಾರಾಟಕ್ಕೆ ಸಮರ್ಪಕವಾಗಿ ಅಂಗಡಿ ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿದರು. ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷೆ ಶ್ರುತಿ ಪೂಜಾರಿ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ವಿನೋದ ಗುತ್ತೇದಾರ, ಸಂತೋಷ ಚೌಧರಿ, ಮಹ್ಮದ ರಸೂಲ ಮುಸ್ತಫಾ, ಪ್ರಭು ಗಂಗಾಣಿ, ಸುಮಂಗಲಾ ಸಣ್ಣೂರಕರ್‌, ಕಾಶಿಬಾಯಿ ಬೆಣ್ಣೂರಕರ್‌, ಸುಶೀಲಾಬಾಯಿ ದೇವಸುಂದರ, ಕೋಟೇಶ್ವರ ರೇಷ್ಮಿ, ಯಮನಪ್ಪ ಬೋಸಗಿ, ಶಶಿಕಾಂತ ಭಂಡಾರಿ, ಹನುಮಾನ ವ್ಯಾಸ್‌ ಸೇರಿದಂತೆ ಪುರಸಭೆ ಅಧಿಕಾರಿಗಳು ಇದ್ದರು. ಕ್ರಾಂತಿಕುಮಾರಿ ಚರೋಳ್ಳಿ ಖರ್ಚು, ವೆಚ್ಚಗಳ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next