Advertisement
ಕಾಮಣ್ಣ ದೊಡ್ಡ ಹಣಮಂತ (35) ಮೃತ ದುರ್ದೈವಿಯಾಗಿದ್ದು ತಮ್ಮ ಸುರೇಶ ದೊಡ್ಡ ಹಣಮಂತ ಆರೋಪಿಯಾಗಿದ್ದಾನೆ.
ಜು.5ರಂದು ಇಟಗಾ ಗ್ರಾಮದಲ್ಲಿ ಕಾಮಣ್ಣ ದೊಡ್ಡ ಹಣಮಂತ ಅವರ ಮೃತದೇಹ ಅವರ ಮನೆಯ ಪಕ್ಕದಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಮನೆಮಂದಿ ಮನೆಯ ಛತ್ತಿನ ಮೇಲಿನಿಂದ ಬಿದ್ದು ಮೃತಪಟ್ಟಿರಬೇಕು ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಲಾಗಿತ್ತು.
Related Articles
Advertisement
ಶವ ಪರೀಕ್ಷೆ ವರದಿಯಲ್ಲಿ ಕೊಲೆ ಆಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು, ಇದಕ್ಕೆ ಸಂಬಂಧಿಸಿ ಆ.23ರಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಸೇಡಂ ತಾಲೂಕಿನ ತೊಲಮಾಮಡಿ ಗ್ರಾಮದಲ್ಲಿ ಹೊಲ ಖರೀದಿ ಮಾಡಿದ್ದ ಕಾಮಣ್ಣ ದೊಡ್ಡ ಹಣಮಂತ ಮಾರಾಟ ಮಾಡುವುದು ಬೇಡ ಎಂದರೂ ಕೇಳದೆ ಎರಡು ತಿಂಗಳ ಹಿಂದೆ 56 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಅಲ್ಲದೆ ಹೊಲ ಮಾರಿದ ಸ್ವಲ್ಪ ಹಣವನ್ನು ಕಾಮಣ್ಣ ತಂದೆ-ತಾಯಿ ಹೆಸರಿನಲ್ಲಿ, ಇನ್ನೂ ಸ್ವಲ್ಪ ಹಣವನ್ನು ತನ್ನ ಹೆಸರಿನಲ್ಲಿ ಇಟ್ಟಿದ್ದ. ಆದರೆ ತಮ್ಮ ಸುರೇಶನ ಹೆಸರಿನಲ್ಲಿ ಹಣ ಇಟ್ಟಿರಲಿಲ್ಲ. ಕೇಳಿದರೂ ಕೊಟ್ಟಿರಲಿಲ್ಲ ಎಂದು ತಿಳಿದು ಬಂದಿದೆ. ಈ ವಿಚಾರದಲ್ಲೂ ಅಣ್ಣನ ಮೇಲೆ ಸಿಟ್ಟು ಮಾಡಿಕೊಂಡಿದ್ದ ತಮ್ಮ ಜೊತೆಗೆ ಅತ್ತಿಗೆಯ ಜೊತೆ ಸುರೇಶ ಸಲುಗೆಯಿಂದ ಇದ್ದ ಎನ್ನಲಾಗಿದೆ ಈ ವಿಚಾರಕ್ಕೆ ಅಣ್ಣ ಸುರೇಶನಿಗೆ ಬೈದಿದ್ದ ಎನ್ನಲಾಗಿದೆ ಇದರಿಂದ ಸಿಟ್ಟಿಗೆದ್ದ ಸುರೇಶ ಅಣ್ಣನನ್ನು ಹತ್ಯೆಗೈದು ಮನೆಯ ಬದಿ ಎಸೆದಿದ್ದ ಎಂದು ತನಿಖೆ ವೇಳೆ ಹೇಳಿಕೊಂಡಿದ್ದಾನೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.ತನಿಖಾ ತಂಡದ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮ (ತನಿಖೆ), ಎಎಸ್ಐ ಲಾಲಾಹ್ಮದ್, ಸಿಬ್ಬಂದಿ ನಾಗೇಂದ್ರ, ಬಸವರಾಜ, ಚಂದ್ರಶೇಖರ, ಸವಿಕುಮಾರ, ಅಯ್ಯಣ್ಣ, ಸಿದ್ದರಾಮೇಶ, ಈರೇಶ, ವೀರಭದ್ರ ಇದ್ದರು. ಇದನ್ನೂ ಓದಿ: IMD Alerts: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯದಲ್ಲಿ ಭಾರಿ ಮಳೆಯ ಎಚ್ಚರಿಕೆ