Advertisement

Chittapur: 120 ಮನೆಗಳಿಗೆ ನುಗ್ಗಿದ ಮಳೆ ನೀರು; ಅಪಾರ ಹಾನಿ

03:02 PM Sep 25, 2024 | Team Udayavani |

ಚಿತ್ತಾಪುರ: ತಾಲೂಕಿನಲ್ಲಿ ಸೆ.24ರ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ದಿಗ್ಗಾಂವ ಗ್ರಾಮದ ಹಳ್ಳದ ನೀರು 110 ರಿಂದ 120 ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಆಹಾರ ಸಾಮಾಗ್ರಿಗಳು ಹಾಳಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ಮನೆಗಳಲ್ಲಿ ಮಳೆ‌ ನೀರು ನುಗ್ಗಿ ಅಪಾರ ಪ್ರಮಾಣದ ಆಹಾರ ಸಾಮಾಗ್ರಿಗಳು ಹಾಳಾಗಿದ್ದು, ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಒದಗಿಸಿ ಕೊಡಲಾಗುವುದು. ದಿಗ್ಗಾಂವ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ದಾಖಲೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಹರಳಯ್ಯ ಬಡಿಗೇ‌ರ್, ಸಿದ್ದಣ್ಣಗೌಡ ಆ‌ರ್.ಡಿ, ಶ್ರೀಮಂತ ಗುತ್ತೇದಾರ, ಶರಣು ಸೇರಿದಂತೆ ಇತರರು ಇದ್ದರು.

ಅದೇ ರೀತಿ ಇಟಗಾ ಗ್ರಾಮದ ಸಮೀಪದ ಓರಿಯಂಟ್ ಸಿಮೆಂಟ್ ಕಂಪೆನಿಯ ಮಶೀನರಿಗಳಲ್ಲಿ, ಕಚೇರಿ ಹಾಗೂ ಆವರಣದಲ್ಲಿ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿರುವ ಮಾಹಿತಿ ತಿಳಿದು ಬಂದಿದೆ.

Advertisement

ಬೆಳೆ ಸಂಪೂರ್ಣ ಹಾನಿ:

ಕಳೆದ 2-3 ದಿನಗಳಿಂದ  ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಂಡೋತಿ, ಭಾಗೋಡಿ, ಮುಡಬೂಳ, ಮರಗೋಳ, ದಿಗ್ಗಾಂವ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಲ್ಲಿ ಮಳೆ ನೀರು ನುಗ್ಗಿ ತೊಗರಿ ಬೆಳೆ ಹಾನಿಯಾಗಿದೆ.

ಮಳೆ ವಿವರ: ಚಿತ್ತಾಪುರ ಪಟ್ಟಣದಲ್ಲಿ 53.6 ಮಿ.ಮೀ, ಗುಂಡಗುರ್ತಿ ವಲಯದಲ್ಲಿ 0.0 ಮಿ.ಮೀ, ನಾಲವಾರ ವಲಯದಲ್ಲಿ 20.2 ಮಿ.ಮೀ, ಅಳ್ಳೋಳ್ಳಿ ವಲಯದಲ್ಲಿ 20.2 ಮಿ‌.ಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next