Advertisement

ಸಕಲ ಸರ್ಕಾರಿ ಗೌರವದೊಂದಿಗೆ ಪದ್ಮಶ್ರಿ ಚಿಟ್ಟಾಣಿ ಅಂತಿಮ ಸಂಸ್ಕಾರ

11:11 AM Oct 04, 2017 | Team Udayavani |

ಹೊನ್ನಾವರ : ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತಿಮ ಸಂಸ್ಕಾರವನ್ನು ಬುಧವಾರ  ಸಂಜೆ ಸ್ವಗೃಹ ಹೊನ್ನಾವರದ ಗುಡ್ಡೆಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. 

Advertisement

ಪೊಲೀಸರು ಗಾಳಿಯಲ್ಲಿ  3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಈ ವೇಳೆ ಸಾವಿರಾರು ಚಿಟ್ಟಾಣಿ ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆದು ಭಾವುಕರಾದರು. 

ಬೆಳಗ್ಗೆ 8.30 ರ ವರಗೆ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ರಘುಪತಿ ಭಟ್‌, ಯಕ್ಷಗಾನ ಮೇಳಗಳ ಯಜಮಾನ ಕಿಶನ್‌ ಹೆಗ್ಡೆ ಸೇರಿದಂತೆ ನೂರಾರು ಗಣ್ಯರು ,ಅಭಿಮಾನಿಗಳು ಅಂತಿಮ ದರ್ಶನ ಪಡೆದರು.


ವಿಶೇಷ ವಾಹನದಲ್ಲಿ ಹೆದ್ದಾರಿಯಲ್ಲಿ ಹೊನ್ನಾವರಕ್ಕೆ  ಪಾರ್ಥೀವ ಶರೀರದ ಯಾತ್ರೆ ನಡೆಸಲಾಯಿತು. ಪುತ್ರ,ಪ್ರಸಿದ್ಧ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಜೊತೆಯಲ್ಲಿದ್ದರು.

ಕೋಟದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು ನೂರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. 

Advertisement

ಮುರ್ಡೇಶ್ವರದಲ್ಲೂ ಸ್ವಾಗತ ಗೋಪುರದ ಬಳಿ ಮಧ್ಯಾಹ್ನ 12.30 ರ ವೇಳೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಿಎಂ ಸಂತಾಪ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದು , ಚಿಟ್ಟಾಣಿ ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next