Advertisement

27ರಿಂದ ಚಿತ್ರಾವತಿ ನದಿ ಸ್ವಚ್ಛತಾ ಅಂದೋಲನಕ್ಕೆ ಚಾಲನೆ

07:29 AM Feb 25, 2019 | |

ಬಾಗೇಪಲ್ಲಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಚಿತ್ರಾವತಿ ನದಿ ಒತ್ತುವರಿ ಹಾಗೂ ಕಸಕಡ್ಡಿಗಳಿಂದ ತುಂಬಿದ್ದು, ತೆರವುಗೊಳಿಸುವ ನಿಟ್ಟಿನಲ್ಲಿ ಫೆ. 27ರಿಂದ ಮೂರು ದಿನಗಳ ಕಾಲ ಚಿತ್ರಾವತಿ ಸ್ವಚ್ಛತೆ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ. 

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಶನಿವಾರ ಸಂಜೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರ  ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚಿತ್ರಾವತಿ ನದಿಗೆ ಹಿಂದಿನ ಗತವೈಭವವನ್ನು ತಂದುಕೊಡುವ ನಿಟ್ಟಿನಲ್ಲಿ ಅಗತ್ಯ ಕಾರ್ಯಗಳನ್ನು ಮಾಡಲು ತೀರ್ಮಾನಿಸಲಾಯಿತು. 

ರಿಯಲ್‌ ಎಸ್ಟೇಟ್‌ ಮಾಫಿಯಾ ಕಣ್ಣು: ಒಂದು ಕಾಲದಲ್ಲಿ ಜೀವನದಿಯಾಗಿದ್ದ ಚಿತ್ರಾವತಿ ನದಿ ವರ್ಷಗಳು ಕಳೆದಂತೆಲ್ಲಾ ನೀರಿಲ್ಲದೆ ಒಣಗುತ್ತಿದೆ. ಇದೇ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ರಿಯಲ್‌ ಎಸ್ಟೇಟ್‌ ಮಾಫಿಯಾ ಚಿತ್ರಾವತಿ ದಡವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸುತ್ತಿದ್ದರೆ, ಮತ್ತೂಂದೆಡೆ ಬಾಲಾಜಿ ಬಾಜಿರಾಯನ ಕಾಲುವೆಯನ್ನು ಮುಚ್ಚಿಹಾಕಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. 

ಕಠಿಣ ಕ್ರಮಕ್ಕೆ ಆಗ್ರಹ: ಚಿತ್ರಾವತಿ ಸೇತುವೆ ಅಕ್ಕಪಕ್ಕದಲ್ಲಿ ಪಟ್ಟಣದ ತ್ಯಾಜ್ಯವನ್ನೆಲ್ಲಾ ಸುರಿಯಲಾಗುತ್ತಿದೆ. ಮತ್ತೂಂದೆ ಕಡೆ ಶೌಚಾಲಯದ ಕಲ್ಮಶಗಳನ್ನು ನದಿ ಪಾತ್ರಕ್ಕೆ ನೇರವಾಗಿ ಬಿಡುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿತವಾದವು. ಇವುಗಳ ಬಗ್ಗೆ ತಾಲೂಕು ಆಡಳಿತ ಕಠಿಣ ಕ್ರಮಗಳನ್ನು ಜರುಗಿಸಬೇಕು ಮತ್ತು ನದಿಪಾತ್ರದ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು. 

ಈ ಹಿಂದೆಯೂ ಒತ್ತುವರಿ ತೆರವುಗೊಳಿಸಲಾಗಿತ್ತಾದರೂ ಮತ್ತೆ ಮರು ನಿರ್ಮಾಣ ಮಾಡಿದ್ದಾರೆ. ಇತರೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸಭೆಯಲ್ಲಿ ವಿವಿಧ ಮುಖಂಡರು ತಾಲೂಕು ಆಡಳಿತದ ಗಮನಕ್ಕೆ ತಂದರು. 

Advertisement

ಇದಕ್ಕೆ ಸ್ಪಂದಿಸಿದ ಗ್ರೇಡ್‌-2 ತಹಶೀಲ್ದಾರ್‌ ಸಿಗªತ್‌ವುಲ್ಲಾ ಮತ್ತು ಶಿರಸ್ತೇದಾರ ನಾಗರಾಜು ರವರು ಇಲ್ಲಿನ ತಹಶೀಲ್ದಾರ್‌ಗೆ ವರ್ಗಾವಣೆಯಾಗಿದೆ. ಮತ್ತೂಂದೆಡೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಹಂತದಲ್ಲಿ ಒತ್ತುವರಿ ತೆರವು ಮಾಡಲು ತಾಲೂಕು ಆಡಳಿತಕ್ಕೆ ಕಷ್ಟವಾಗುತ್ತದೆ. ಚುನಾವಣೆ ಮುಗಿದ ನಂತರ ಒತ್ತುವರಿ ತೆರವು ಕಾರ್ಯ ಮಾಡಲಾಗುತ್ತದೆ ಎಂದರು. 

ಮುಖ್ಯ ರಸ್ತೆಯಲ್ಲಿ ಮೆರವಣಿಗೆ: ಸದ್ಯಕ್ಕೆ ಚಿತ್ರಾವತಿ ನದಿ ಪಾತ್ರವನ್ನು ಸ್ವಚ್ಛತೆ ಮಾಡೋಣ. ಈ ಬಗ್ಗೆ ಮೂರು ದಿನಗಳ ಆಂದೋಲನವನ್ನು ಹಮ್ಮಿಕೊಂಡು ವಿವಿಧ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಪುರಸಭೆ, ಅಧಿಕಾರಿಗಳು ಸೇರಿ ನದಿ ಪಾತ್ರವನ್ನು ಸ್ವಚ್ಛಗೊಳಿಸೋಣ ಎಂಬ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ, ಹಿರಿಯ ವಕೀಲ ಎ.ಜಿ.ಸುಧಾಕರ್‌, ಧರ್ಮದರ್ಶಿ ಕೆ.ಎಂ.ನಾಗರಾಜ್‌, ಕನ್ನಡಸೇನೆ ಬಾಬಾಜಾನ್‌, ನರೇಗಾ ಎಡಿ ರವೀಂದ್ರ, ಉಪನ್ಯಾಸಕ ನಾರಾಯಣಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್‌  ಪೊ.ವೈ.ನಾರಾಯಣ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next