Advertisement
ಮುಂಜಾನೆ ನಸುಕಿನ ಜಾವದಲ್ಲಿ ಸೂರ್ಯ ಬರಲು ತಡವಾಗುತ್ತಿದ್ದು, ಬಿಸಿಲನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಒಂದೆಡೆಯಾದರೆ, ಮಂಜು ಕವಿದ ವಾತಾವರಣದಿಂದ ವಾಹನ ಸವಾರರು ಬೆಳಕಾದರೂ ದೀಪ ಹಾಕಿಕೊಂಡು ಹೋಗುವ ಸಾಮಾನ್ಯ ದೃಶ್ಯಗಳು ಕಂಡು ಬರುತ್ತಿವೆ.
ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಚಳಿ ಎಲ್ಲಿಂದ ಬರುತ್ತದೆ ಎಂದು ತಿಳಿದ್ದವರೀಗ ಹೊರಗೆ ಬರುತ್ತಿಲ್ಲ. ಒಂದು ವೃಳೆ ಹೊರಗೆ ಬಂದರೂ ಮಧ್ಯಾಹ್ನ 12 ಗಂಟೆ ಮೇಲೆ. ಅದೂ ಮುಖಕ್ಕೆ ಮಫ್ಲರ್, ಟವಲ್, ದಸ್ತಿ, ಟೋಪಿ ಹಾಗೂ ಕಾಲಿಗೆ ಶೂ ಹಾಕಿಕೊಂಡು ಬರುತ್ತಿದ್ದಾರೆ. ಸಂಜೆ 5 ಗಂಟೆಯಾಗುತ್ತಿದ್ದಂತೆ ಮತ್ತೇ ಮನೆ ಕಡೆ ಮುಖ ಮಾಡಿ ಮನೆಯಲ್ಲಿನ ಕಿಟಕಿ, ಬಾಗಿಲು ಮುಚ್ಚಿಕೊಂಡು ಬೆಚ್ಚಗೆ ಕುಳಿತುಕೊಳ್ಳುತ್ತಿದ್ದಾರೆ. ಪಟ್ಟಣಕ್ಕೆ ಸರ್ಕಾರಿ ಕೆಲಸಕ್ಕೆ ಅಥವಾ ವ್ಯಾಪಾರಕ್ಕೆ ತಮ್ಮ ದಿನನಿತ್ಯದ ಕೆಲಸಕ್ಕೆಂದು ಸುತ್ತಮುತ್ತಲಿನ ಅಳ್ಳೊಳ್ಳಿ,
ಸಾತನೂರ, ಹೊಸ್ಸುರ್, ದಿಗ್ಗಾಂವ, ಮುಡಬೂಳ, ದಂಡೋತಿ, ರಾವೂರ, ಯರಗಲ್, ದಂಡಗುಂಡ, ಸಂಕನೂರ, ಡೋಣಗಾಂವ, ಭೀಮನಳ್ಳಿ ಸೇರಿದಂತೆ ಇತರೆ ಗ್ರಾಮ ಗಳಿಂದ ಬರುವ ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಹುಲ್ಲು, ಕಟ್ಟಿಗೆ, ಪೇಪರ್‌ಗಳನ್ನು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ.