Advertisement

ಚಿತ್ರಾಪುರ ಮಠದಿಂದ ಮಂಗಳೂರು ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 2 ಲಕ್ಷದ ಚೆಕ್ ಹಸ್ತಾಂತರ

05:27 PM May 14, 2020 | sudhir |

ಮಂಗಳೂರು : ಶ್ರೀ ಚಿತ್ರಾಪುರ ಮಠ, ಶಿರಾಲಿ ಇದರ ವತಿಯಿಂದ ಹಾಗೂ ಮಠದ ಮಠಾಧಿಪತಿಯವರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮಂಗಳೂರಿನ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಕೋವಿಡ್ 19 ಮಹಾಮಾರಿಯಿಂದ ಉಂಟಾದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಜನ ಸೇವೆಯೇ ಜನಾರ್ಧನ ಸೇವೆಯೆಂದು ಭಾವಿಸಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥವಾಗಿ ಸೇವೆಯನ್ನು ಶ್ಲಾಘಿಸಿ ಕಾರ್ಯಕರ್ತರನ್ನು ಅಭಿನಂದಿಸುತ್ತಾ ಅವರ ಒಳಿತಿಗಾಗಿ ಮಠದ ಕಾಣಿಕೆಯೆಂದು ರೂ.2.00 ಲಕ್ಷದ ಚೆಕ್ಕನ್ನು ಮಂಗಳೂರು ಶಾಖಾಮಠದ ವಹಿವಾಟುದಾರ ಶ್ರೀ ಮದನ್ ಬೊಂಡಾಲ್ ಹಾಗೂ ಶ್ರೀ ರಾಮಕಿಶೋರ್ ಎಲ್ಲೂರ್, ಶ್ರೀ ಗಣೇಶ್ ದಂಬ್ಲೆ, ಶ್ರೀ ಭರತ್ ನಾಗರಮಠ, ಶ್ರೀಮತಿ ಪ್ರತಿಭಾ ಪಡುಬಿದ್ರಿ ಹಾಗೂ ಅರ್ಚಕರಾದ ಶ್ರೀ ಗುರುಪ್ರಸಾದ್ ಭಟ್ ಇವರ ಉಪಸ್ಥಿತಿಯಲ್ಲಿ RSS ಮುಖಂಡರಾಗಿರುವ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕರಾದ ಡಾ. ಪಿ ವಾಮನ್ ಶೆಣೈ ಮತ್ತು ಮಹಾನಗರ ಕಾರ್ಯವಾಹ ಶ್ರೀ ಹರಿಕೃಷ್ಣ ಹಾಗೂ ಶ್ರೀ ಸಿ. ಪಿ. ಕಾಮತ್ ಇವರಿಗೆ ಹಸ್ತಾಂತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next