Advertisement

ಚಿತ್ರದುರ್ಗ: ಸರಳವಾಗಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ

07:21 PM Sep 12, 2020 | Mithun PG |

ಚಿತ್ರದುರ್ಗ: ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಕೋವಿಡ್ ಕಾರಣಕ್ಕೆ ಇಂದು ಸರಳವಾಗಿ ನಡೆಯಿತು.

Advertisement

ಸಂಜೆ 4.45ಕ್ಕೆ ವಿವಿಧ ಮಠಾಧೀಶರಿಂದ ಪುಷ್ಪಾರ್ಚನೆಯೊಂದಿಗೆ ಆರಂಭವಾದ ವಿಸರ್ಜನಾ ಮೆರವಣಿಗೆ 6ಗಂಟೆಗೆ ಗಾಂಧಿ ವೃತ್ತ ತಲುಪಿತು. ಗಾಂಧಿ ವೃತ್ತದಲ್ಲಿ ಆರತಿ ಮಾಡಿದ ನಂತರ ಚಂದ್ರವಳ್ಳಿ ಕಡೆಗೆ ಸಾಗಿತು.

ಕೋವಿಡ್ ಸಂಕಷ್ಟ ಇರುವುದರಿಂದ ಜನ ಸೇರುವುದು ಬೇಡ ಎಂದು ವಿಎಚ್‌ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಮನವಿ ಮಾಡಿದ್ದರು. ಆದರೆ, ಗಣಪತಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ರಸ್ತೆಗೆ ಆಗಮಿಸಿದ್ದರು.

ಜನರನ್ನು ನಿಯಂತ್ರಿಸಲು ಪೊಲೀಸರು ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಅಳವಡಿಸಿದ್ದರು. ಇದರಿಂದ ಮೆರವಣಿಗೆಯಲ್ಲಿ ಭಾಗವಹಿಸಲು ಬಂದವರು ರಸ್ತೆ ಬದಿಯಲ್ಲೇ ನಿಂತು ನೋಡಿ ವಾಪಾಸಗುತ್ತಿದ್ದರು.

Advertisement

ಮೆರವಣಿಗೆ ಕಾರ್ಯಕ್ರಮದಲ್ಲಿ ಕೂಡಲಿ ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯ ವಿದ್ಯಾಭಿನವ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಪುರುಷೋತ್ತಮನಾಂದಪುರಿ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಟಿ. ಬದರೀನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next