Advertisement

Chitradurga;ಕೆಸರಲ್ಲೇ ಓಡಾಟ, ಬಿದ್ದರು ಕೇಳೋರಿಲ್ಲ, ಅಧಿಕಾರಿಗಳ ಇಚ್ಚಾಸಕ್ತಿ ಕೊರತೆ

01:56 PM Jul 07, 2023 | Team Udayavani |

ಚಿತ್ರದುರ್ಗ : ಹೊಳಲ್ಕೆರೆ ತಾಣ ಚಿಕ್ಕಜಾಜೂರು ಗ್ರಾಮಪಂಚಾಯ್ತಿ ಕಚೇರಿ ಆವರಣ ಹಾಗೂ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ವಾಹನ ಸವಾರರು, ಗ್ರಾಮದ ಜನರು ಓಡಾಡಲು ಬಹಳಷ್ಟು ಸಮಸ್ಯೆ ಎದುರಾಗಿದೆ.

Advertisement

ರೆವಿನ್ಯು ಕಚೇರಿ, ಪಶು ವೈದ್ಯ ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ ಮತ್ತು ಬಿಎಸ್ ಎನ್ ಎಲ್ ಕಚೇರಿಗಳಿಗೆ ಹೋಗಲು ಬರಲು ಇರುವುದು ಇದೊಂದೇ ದಾರಿಯಾಗಿದೆ.

ಹಾಗೆಯೇ  ಚಿಕ್ಕಜಾಜೂರು ಪೊಲೀಸ್ ಸಿಬ್ಬಂದಿಗಳ ವಸತಿಗೃಹಗಳಿಗೆ ಹೋಗಲು ಇದೇ ದಾರಿ ಬೇಕಾಗಿದೆ ಆದರೂ ಗ್ರಾಮಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು ಕೆಸರಲ್ಲೆ ಓಡಾಡಿದರು ಕಣ್ಣಿಗೆ ಕಾಣುತ್ತಿಲ್ಲ , ಅನಾವಶ್ಯಕ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡೋ ಪಂಚಾಯಿತಿಯವರಿಗೆ ಈ ರಸ್ತೆ ಸರಿಪಡಿಸಲು ಅನುದಾನವಿಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ದಿನನಿತ್ಯ ನೂರಾರು ಸಾರ್ವಜನಿಕರು, ನೂರಾರು ವಾಹನಗಳು ಸಂಚರಿಸುವ ರಸ್ತೆಯ ಈ ಅವ್ಯವಸ್ಥೆ ಪ್ರತಿ ವರ್ಷ ಮುಂದುವರೆಯುತ್ತಿದೆ, ಸಂಬಂಧಿತ ಮೇಲಾಧಿಕಾರಿಗಳು ಈ ಗ್ರಾಮದ ಕಡೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಿ ದಿನನಿತ್ಯ ಕಚೇರಿಗಳಿಗೆ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next