Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಯಲ್ಲಿ ಶೇ. 94 ರಷ್ಟು ಪಡಿತರ ವಿತರಣೆಯಾಗಿದೆ. ಪಡಿತರಚೀಟಿಗೆ ಅರ್ಜಿ ಸಲ್ಲಿಸಿರುವ 3594 ಅರ್ಜಿದಾರರಿಗೂ ಪಡಿತರ ತಲುಪಬೇಕು. ಜಿಲ್ಲೆಯಲ್ಲಿರುವ 580 ನ್ಯಾಯಬೆಲೆ ಅಂಗಡಿಗಳ ಮುಂದೆ ಸರ್ಕಾರ ಉಚಿತವಾಗಿ ನೀಡುವ ಪಡಿತರ ವ್ಯವಸ್ಥೆಯ ದಾಸ್ತಾನು ವಿವರದ ಮಾಹಿತಿ ಹಾಗೂ ಉಚಿತವಾಗಿ ನೀಡುತ್ತಿರುವ ಅಕ್ಕಿಯ ವಿವರ ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಚೀಟಿಗಳಿದ್ದು, ಇದರಲ್ಲಿ 3,81,264 ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಣೆ ಮಾಡಲಾಗಿದೆ. ಒಟ್ಟು 7529 ಎನ್‌ಪಿಎಚ್ ಎಚ್ ಪಡಿತರ ಚೀಟಿದಾರರಿದ್ದು, ಇದರಲ್ಲಿ 3952 ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿರುವ 274 ಅರ್ಜಿದಾರರಿಗೂ 10 ಕೆಜಿಯಂತೆ ಅಕ್ಕಿಯನ್ನು ಈಗಾಗಲೇ ವಿತರಿಸಲಾಗಿದೆ ಎಂದರು.
Related Articles
Advertisement
3165 ಅನರ್ಹ ಪಡಿತರ ಚೀಟಿ ರದ್ದು: ಜಿಲ್ಲೆಯಲ್ಲಿ ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು 3165 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಿದ್ದು, ಒಟ್ಟು 84 ಸಾವಿರ ರೂ. ದಂಡ ವಿ ಧಿಸಲಾಗಿದೆ. 375 ಅನರ್ಹ ಪಡಿತರ ಚೀಟಿದಾರರು ಸ್ವಯಂ ಪ್ರೇರಣೆಯಿಂದ ಕಚೇರಿಗೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಲಾಯಿತು. ಸಭೆಯಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಎಸ್. ಹೊನ್ನಂಬ, ಅಪರ ಜಿಲ್ಲಾ ಧಿಕಾರಿ ಸಿ. ಸಂಗಪ್ಪ ಹಾಗೂ ತಹಶೀಲ್ದಾರರು ಭಾಗವಹಿಸಿದ್ದರು.
ಮೇ 31 ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಮೇ 31 ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗುತ್ತಿದೆ. ಆದರೆ ಮಣ್ಣು, ಕಲ್ಲು, ಧೂಳಿನಿಂದ ಕೂಡಿದ ರಾಗಿ ಖರೀದಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಧಿಕಾರಿಗೆ ಸೂಚನೆ ನೀಡಿದ್ದು ಗೋದಾಮುಗಳನ್ನು ಪರಿಶೀಲಿಸಲಾಗುತ್ತದೆ. ಗುಣಮಟ್ಟದ ರಾಗಿ ಖರೀದಿಸದ ಆಹಾರ ನಿಗಮದ ಅ ಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು. ಈ ಬಗ್ಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪ ಮಾಡಿದ್ದರು.