ಚಿತ್ರದುರ್ಗ: ಜಿಲ್ಲೆಯಲ್ಲಿರುವ ವಾಹನಗಳ ಸಂಖ್ಯೆ ಬರೋಬ್ಬರಿ 3.60 ಲಕ್ಷ. ಆದರೆ, ಇಷ್ಟೂ ವಾಹನಗಳ ಮಾಲಿನ್ಯ ತಪಾಸಣೆಗೆ ಇರುವ ಕೇಂದ್ರಗಳ ಸಂಖ್ಯೆ ಕೇವಲ ಎರಡು.
Advertisement
ಹೊಗೆ ತಪಾಸಣೆ ಅಥವಾ ಮಾಲಿನ್ಯ ತಪಾಸಣೆ ಕುರಿತು ಜಿಲ್ಲೆಯ ವಾಹನ ಸವಾರರು, ಮಾಲೀಕರಲ್ಲಿ ಇರುವ ಗಾಂಭೀರ್ಯತೆಯನ್ನು ಈ ಅಂಕಿ ಅಂಶಗಳು ಎತ್ತಿ ತೋರಿಸುತ್ತವೆ.
Related Articles
Advertisement
ಸದ್ಯ ಕಾರ್ಯನಿರ್ವಹಿಸುತ್ತಿರುವ ಮಾಲಿನ್ಯ ತಪಾಸಣೆ ಕೇಂದ್ರಗಳು ಸಂಪೂರ್ಣ ಆನ್‌ಲೈನ್ ಆಗಿವೆ. ಹಾಗಾಗಿ ಕೈ ಬರವಣಿಗೆಯ ಪ್ರಮಾಣ ಪತ್ರಗಳನ್ನು ಪೊಲೀಸರು ನಿರಾಕರಿಸುತ್ತಾರೆ. ಈವರೆಗೆ ಈ ಕೇಂದ್ರಗಳ ಬಗ್ಗೆ ಆರ್‌ಟಿಒ ಕಚೇರಿಗೆ ಯಾವುದೇ ದೂರುಗಳು ದಾಖಲಾಗಿಲ್ಲ.
ಕೇಂದ್ರ ಸರ್ಕಾರ ದಂಡದ ಪ್ರಮಾಣ ಹೆಚ್ಚಳ ಮಾಡಿದ್ದರಿಂದ ತಪಾಸಣೆ ಮಾಡುವ ಕೇಂದ್ರಗಳನ್ನು ತೆರೆಯಲು ನಿಧಾನವಾಗಿ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಚಳ್ಳಕೆರೆ ಹಾಗೂ ಹಿರಿಯೂರು ನಗರದಲ್ಲಿ ಕೇಂದ್ರಗಳನ್ನು ತೆರೆಯಲು ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, 15 ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಕೇಂದ್ರಗಳಿಲ್ಲ. ನಿರ್ದಿಷ್ಟವಾಗಿ ತಪಾಸಣೆ ಪ್ರಮಾಣ ಪತ್ರಕ್ಕಾಗಿ ನಾವು ದಂಡ ಹಾಕಿಲ್ಲ ಎನ್ನುತ್ತಾರೆ ಆರ್‌ಟಿಒ ಜಿ.ಎಸ್. ಹೆಗಡೆ