Advertisement

ಕನ್ನಡಕ್ಕೆ ಹೊಸ ತಾರಾ “ಚಿತ್ರದುರ್ಗದ ಒನಕೆ ಓಬವ್ವ’ಶುರು

05:04 PM May 11, 2017 | Sharanya Alva |

“ಚಿತ್ರದುರ್ಗದ ಓನಕೆ ಓಬವ್ವ’ ಚಿತ್ರದಲ್ಲಿ ತಾರಾ ನಟಿಸುತ್ತಾರೆ ಎನ್ನಲಾಗಿತ್ತು. ತಾರಾ ಅವರ ಹೊಸ ಗೆಟಪ್‌ ಹೇಗಿರುತ್ತದೆ ಎಂದು ಮುಹೂರ್ತ ದಿನ ಕಂಠೀರವ ಸ್ಟುಡಿಯೋಗೆ ಹೋದ ಪತ್ರಕರ್ತರಿಗೆ ಅಲ್ಲಿ ಕಾಣಸಿಕ್ಕಿದ್ದು ಹೊಸ ತಾರಾ! ಆಗಷ್ಟೇ ಕಾಲೇಜು ಮುಗಿಸಿಕೊಂಡು ಬಂದ ತಾರಾ ಓಬವ್ವ ಪಾತ್ರಕ್ಕೆ ಜೀವ ತುಂಬುವ ಉತ್ಸಾಹದಲ್ಲಿದ್ದರು. ಅಷ್ಟಕ್ಕೂ ಯಾರು ಈ ತಾರಾ ಎಂದರೆ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ತಾರಾ. ಹೌದು, ತಾರಾ ಎಂಬ ಹೊಸ ನಟಿ “ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರದಲ್ಲಿ ಓಬವ್ವ ಪಾತ್ರ ಮಾಡುತ್ತಿದ್ದಾರೆ. ಅಲ್ಲಿಗೆ ಚಿತ್ರರಂಗಕ್ಕೆ ಮತ್ತೂಬ್ಬ ತಾರಾ ಸಿಕ್ಕಂತಾಗಿದೆ.

Advertisement

ತಾರಾ ಮೂಲತಃ ತುಮಕೂರಿನವರು. ಕಾಲೇಜು ದಿನಗಳಲ್ಲೇ ನಟನೆಯ ಆಸಕ್ತಿ ಹೊಂದಿದ್ದ ತಾರಾಗೆ ಈಗ “ಓಬವ್ವ’ ಸಿಕ್ಕಿದೆ. ಪುರುಷೋತ್ತಮ್‌ ಈ ಸಿನಿಮಾದ ನಿರ್ದೇಶಕರು. ತಾರಾ ಲುಕ್‌ ನೋಡಿದ ಪುರುಷೋತ್ತಮ್‌ ಪಾತ್ರಕ್ಕೆ ಹುಡುಗಿ ಹೊಂದಿಕೆಯಾಗುತ್ತಾಳೆಂದು ಅವರಿಗೆ ಅವಕಾಶ ಕೊಟ್ಟಿದ್ದಾರೆ. ಪಾತ್ರಕ್ಕಾಗಿ ಕುದುರೆ ಸವಾರಿ, ಈಜು ಸೇರಿದಂತೆ ಒಂದಷ್ಟು ತರಬೇತಿ ಪಡೆದಿದ್ದಾರಂತೆ ತಾರಾ.

“ಮೊದಲ ಸಿನಿಮಾದಲ್ಲೆ ಒಳ್ಳೆಯ ಪಾತ್ರ ಸಿಕ್ಕಿದೆ. ಪಾತ್ರಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿ ತಯಾರಿ ಕೂಡಾ ನಡೆಸುತ್ತಿದ್ದೇನೆ’ ಎನ್ನುವುದು ತಾರಾ ಮಾತು. ಪುರುಷೋತ್ತಮ್‌ ಅವರು ಬಿ.ಎಲ್‌. ವೇಣು ಅವರ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ರವಿಚೇತನ್‌, ಗಣೇಶ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next