Advertisement

ಭಯ ಮುಕ್ತರಾಗಿ ಲಸಿಕೆ ಹಾಕಿಸಿಕೊಳ್ಳಿ

03:06 PM Jan 04, 2022 | Team Udayavani |

ಚಿತ್ರದುರ್ಗ: ಕೋವಿಡ್‌ನಿಂದ ಬಹಳಷ್ಟುನೋವು ಅನುಭವಿಸಿದ್ದೇವೆ. ಇನ್ನಾದರೂಎಚ್ಚೆತ್ತುಕೊಂಡು ಎಲ್ಲರೂ ಕಡ್ಡಾಯವಾಗಿಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕಜಿ.ಎಚ್‌. ತಿಪ್ಪಾರೆಡ್ಡಿ ಕರೆ ನೀಡಿದರು. ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಸಹಯೋಗದಲ್ಲಿ ಸೋಮವಾರಬಾಲಕಿಯರ ಸರ್ಕಾರಿ ಪದವಿಪೂರ್ವಕಾಲೇಜಿನಲ್ಲಿ 15ರಿಂದ 18 ವರ್ಷದೊಳಗಿನಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆಕೋವಿಡ್‌-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆನೀಡಿ ಅವರು ಮಾತನಾಡಿದರು.ಸರ್ಕಾರ ಈವರೆಗೆ 148 ಕೋಟಿ ಡೋಸ್‌ಲಸಿಕೆಯನ್ನು ಉಚಿತವಾಗಿ ನೀಡಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳರಕ್ಷಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ15ರಿಂದ 18 ವರ್ಷ ವಯೋಮಿತಿಯಮಕ್ಕಳಿಗೆ ಉಚಿತವಾಗಿ ಕೋವಿಡ್‌ಲಸಿಕೆ ನೀಡಲಾಗುತ್ತಿದೆ. ಅರ್ಹರೆಲ್ಲರೂಲಸಿಕೆ ಹಾಕಿಸಿಕೊಂಡು ಕೋವಿಡ್‌ನಿಂದಮುಕ್ತರಾಗಬೇಕು. ಕೋವಿಡ್‌ ಲಸಿಕಾಅಭಿಯಾನವನ್ನು ಯಶಸ್ವಿಗೊಳಿಸಬೇಕುಎಂದರು.ಕೋವಿಡ್‌ ರೂಪಾಂತರಗೊಳ್ಳುತ್ತಿದ್ದು,ಇದೀಗ ಒಮಿಕ್ರಾನ್‌ ಆವರಿಸಿದೆ.

ಇದನ್ನುಹೊಡೆದೋಡಿಸಲು ನಾವು ಸಜ್ಜಾಗಬೇಕು.ಕೋವಿಡ್‌ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಭಯಪಡದೆ ಎಲ್ಲರೂಕೋವಿಡ್‌ ಲಸಿಕೆ ಪಡೆದು ಸರ್ಕಾರದಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ಮತ್ತು ಸ್ಯಾನಿಟೈಸರ್‌ ಬಳಸುವ ಮೂಲಕರಕ್ಷಣೆ ಪಡೆಯಬೇಕು ಎಂದು ತಿಳಿಸಿದರು.ವಿಧಾನ ಪರಿಷತ್‌ ಸದಸ್ಯಕೆ.ಎಸ್‌. ನವೀನ್‌ಮಾತನಾಡಿ,ಕೋವಿಡ್‌ಲಸಿಕೆಸುರಕ್ಷಿತವಾಗಿದ್ದುಭಯಪಡುವ ಅಗತ್ಯವಿಲ್ಲ. ಎಲ್ಲರೂ ಲಸಿಕೆಪಡೆದು ಕೋವಿಡ್‌ನಿಂದ ರಕ್ಷಣೆ ಪಡೆಯಲುಮುಂದಾಗಬೇಕು.

ಕೋವಿಡ್‌ ನಿಯಂತ್ರಣಕ್ಕೆರಾಯಬಾರಿಗಳಂತೆ ಮಕ್ಕಳು ಕೆಲಸಮಾಡಬೇಕು. ತಂದೆ-ತಾಯಿ, ಪೋಷಕರು,ಕುಟುಂಬದ ಸದಸ್ಯರು ಮನೆಯಿಂದ ಹೊರಗೆತೆರಳುವ ಸಂದರ್ಭದಲ್ಲಿ ಅವರಿಗೆ ಕೋವಿಡ್‌ನಿಯಮಾವಳಿಗಳನ್ನು ತಿಳಿಸುವ ಕೆಲಸಮಾಡುವಂತೆ ಸಲಹೆ ನೀಡಿದರು.ಡಿಎಚ್‌ಒ ಡಾ| ರಂಗನಾಥ್‌ ಮಾತನಾಡಿ,ಲಸಿಕಾ ಅಭಿಯಾನಕ್ಕೆ ಮುನ್ನ ಸಂಬಂಧಿಸಿದವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯಎಲ್ಲಾ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಆಶಾಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾಎಸ್‌. ಮನ್ನಿಕೇರಿ, ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ|ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಕುಮಾರಸ್ವಾಮಿ, ತಹಶೀಲ್ದಾರ್‌ಸತ್ಯನಾರಾಯಣ, ಜಿಲ್ಲಾ ಶಸ್ತ್ರಚಿಕಿತ್ಸಕಬಸವರಾಜ್‌, ತಾಲೂಕು ಆರೋಗ್ಯಾಧಿಕಾರಿಡಾ| ಬಿ.ವಿ. ಗಿರೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿಬಸವರಾಜಯ್ಯ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next