Advertisement

ಕೋಟೆ ನಾಡಲ್ಲಿ ಹೊಸ ವರ್ಷದ ಸಂಭ್ರಮ

05:00 PM Jan 02, 2022 | Team Udayavani |

ಚಿತ್ರದುರ್ಗ:ಕಲರ್‌ ಕಲರ್‌ ಕೂಲಿಂಗ್‌ ಗ್ಲಾಸು, ಕೈಯಲ್ಲಿಮೊಬೈಲು, ಹೆಜ್ಜೆ ಹೆಜ್ಜೆಗೂ ಸೆಲ್ಫಿà, ಗ್ರೂಪ್‌ ಫೋಟೋ,ಮರದ ಕೆಳಗಡೆ ಕಲ್ಲು ಬೆಂಚಿನ ಮೇಲೆ ಕೇಕು ಕತ್ತರಿಸಿಪರಸ್ಪರ ಬಾಯಿಗಿಡುತ್ತಾ ಹ್ಯಾಪಿ ನ್ಯೂ ಇಯರ್‌ಎನ್ನುತ್ತಾ ತಬ್ಬಿ ಕುಣಿಯುವುದು,…

Advertisement

ಇಷೆ rಲ್ಲಾ ದೃಶ್ಯಗಳು ಕಂದು ಬಂದಿದ್ದು ಐತಿಹಾಸಿಕಕೋಟೆಯಲ್ಲಿ. ಹೊಸ ವರ್ಷದ ಸಂಭ್ರಮಾಚರಣೆಗಾಗಿಜಾತ್ರೆಯೋಪಾದಿಯಲ್ಲಿ ಕೋಟೆಗೆ ಆಗಮಿಸಿದ್ದ ಯುವಪಡೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗೆಳೆಯರು,ಕುಟುಂಬ, ಊರಿನವರು, ಪ್ರೇಮಿಗಳು ಸೇರಿದಂತೆವಿವಿಧ ವರ್ಗದ, ದುಬೈ, ಬೆಂಗಳೂರು, ಮೈಸೂರು,ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿಕೋಟೆಗೆ ಆಗಮಿಸಿದ್ದರು.8100 ಪ್ರವಾಸಿಗರ ಆಗಮನ: ಸಾಮಾನ್ಯ ದಿನಗಳಲ್ಲಿಸುಮಾರು ಒಂದೂವರೆ ಸಾವಿರ ಪ್ರವಾಸಿಗರು ಬಂದುಹೋಗುವ ಕೋಟೆಗೆ ಇಂದು 8100 ಪ್ರವಾಸಿಗರುಬಂದಿದ್ದಾರೆ. ಇದು ಕೌಂಟರ್‌ನಲ್ಲಿ ಮಾರಾಟವಾಗಿರುವಟಿಕೇಟ್‌ಗಳ ಲೆಕ್ಕ ಮಾತ್ರ.

ಒಂದು ಟಿಕೇಟ್‌ ದರ 25ರೂ.ಗಳಿತ್ತು. ಒಂದು ದಿನದ ಕೌಂಟರ್‌ ಕಲೆಕ್ಷನ್‌ 2 ಲಕ್ಷರೂ. ಆಗಿದೆ.ದೇವಸ್ಥಾನಗಳಲ್ಲೂ ಜನವೋ ಜನ: ಹೊಸ ವರ್ಷದಸಂಭ್ರಮದ ದಿನ ಪ್ರವಾಸಿ ತಾಣಗಳಿಗೆ ತೆರಳಿರಿಲ್ಯಾಕ್ಸ್‌ ಆಗುವ ಜತೆಗೆ ಬೆಳಗ್ಗೆಯೇ ದೇವಸ್ಥಾನಗಳಿಗೆತೆರಳಿ, ಪೂಜೆ, ಅರ್ಚನೆ ಮಾಡಿಸಿ ಇಡೀ ವರ್ಷಹರ್ಷದಾಯಕವಾಗಿರಲಿ ಎಂದು ಪ್ರಾರ್ಥಿಸಿ ದೇವರಆಶೀರ್ವಾದ ಬೇಡುವವರ ಸಂಖ್ಯೆ ಕೂಡಾ ಸಾಕಷ್ಟಿತ್ತು.ದೇವಸ್ಥಾನಗಳಲ್ಲಿ ಕೂಡಾ ವಿಶೇಷ ಅಲಂಕಾರ, ವಿಶೇಷಪೂಜೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪಾರ್ಕಿಂಗ್‌ಗೆ ಪರದಾಟ: ಈ ಹಿಂದೆ ಕೋಟೆಯ ಪ್ರವೇಶದ್ವಾರದಲ್ಲಿ ಟಿಕೆಟ್‌ಗಾಗಿ ಜಾತ್ರೆಯಂತೆ ರಶ್‌ ಆಗುತ್ತಿತ್ತು.ಆದರೆ ಈ ವರ್ಷ ತುಸು ಮುನ್ನೆಚ್ಚರಿಕೆ ವಹಿಸಿ ಕೋಟೆಯಒಳಗೆ ಹಾಗೂ ಹೊರಗೆ ಬರಲು ಪ್ರತ್ಯೇಕ ಬ್ಯಾರಿಕೇಡ್‌ವ್ಯವಸ್ಥೆ ಮಾಡಿದ್ದರಿಂದ ಎಲ್ಲವೂ ವ್ಯವಸ್ಥಿತವಾಗಿತ್ತು.ಆದರೆ ಪಾರ್ಕಿಂಗ್‌ಗಾಗಿ ಜನ ಪರದಾಡುತ್ತಿದ್ದರು.ಕೋಟೆಯಿಂದ ಮುಂದಿರುವ ಆಂಜನೇಯಸ್ವಾಮಿದೇವಸ್ಥಾನದ ಭಾಗದಲ್ಲಿ ಪಾರ್ಕಿಂಗ್‌ಗೆ ಜಾಗವಿದೆ.ಆದರೆ ಕೋಟೆ ಮುಂಭಾಗದಲ್ಲಿಯೇ ಬ್ಯಾರಿಕೇಡ್‌ಮಾಡಿದ್ದರಿಂದ ವಾಹನಗಳು ಮುಂದೆ ಹೋಗಲುಸಾಧ್ಯವಾಗಲಿಲ್ಲ. ಇದರಿಂದ ಸಣ್ಣ ಪುಟ್ಟ ರಸ್ತೆಗಳಲ್ಲಿಕಾರು, ಬೆ„ಕ್‌, ಬಸ್ಸು ನಿಲ್ಲಿಸಿ ಹಿಂದೆ ಮುಂದೆ ಹೋಗಲುಪರದಾಡುವ ದೃಶ್ಯಗಳು ಇಡೀ ದಿನ ಕಂಡುಬಂದವು.

Advertisement

Udayavani is now on Telegram. Click here to join our channel and stay updated with the latest news.

Next