Advertisement

ರಂಗಭೂಮಿಯಿಂದ ಸಮಾಜಕ್ಕೆ ಉತ್ತಮ ಸಂದೇಶ

05:17 PM Dec 28, 2021 | Team Udayavani |

ಚಿತ್ರದುರ್ಗ: ಸಮಾಜಕ್ಕೆ ಉತ್ತಮ ಸಂದೇಶ ಸಾರುವನಾಟಕಗಳನ್ನು ನಶಿಸಿ ಹೋಗಲು ಬಿಡಬಾರದು ಎಂದುಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದರು.ರಂಗ ಕಹಳೆ ಬೆಂಗಳೂರು ಹಾಗೂ ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ತರಾಸುರಂಗಮಂದಿರದಲ್ಲಿ ಭಾನುವಾರದಿಂದ ಆರಂಭವಾದ 20ನೇ ಕುವೆಂಪು ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಷ್ಟ್ರಕವಿ ಕುವೆಂಪು ರಚಿಸಿರುವನಾಡಗೀತೆ ಸೇರಿದಂತೆ ಬಹುತೇಕ ಗೀತೆಗಳು ಜನರಮನದಲ್ಲಿ ಅಚ್ಚೊತ್ತಿವೆ. ಪುಟ್ಟಪ್ಪನವರು ಅನೇಕಮಹಾಕಾವ್ಯ, ಕೃತಿಗಳನ್ನು ರಚಿಸಿದ್ದಾರೆ. “ಏನಾದರೂಆಗು ಮೊದಲು ನೀ ಮಾನವನಾಗು’ ಎನ್ನುವಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂಟಿವಿ, ಫೇಸ್‌ಬುಕ್‌, ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ಗ್ಳಲ್ಲಿ ಮುಳುಗಿದ್ದಾರೆ.

ನಾಟಕಗಳಿಗೆ ಪ್ರೇಕ್ಷಕರಕೊರತೆಯಿದೆ.ಈ ಹಿನ್ನೆಲೆಯಲ್ಲಿಯಾವುದೇಕಾರಣಕ್ಕೂನಾಟಕಗಳು ನಶಿಸಿ ಹೋಗಲು ಬಿಡಬಾರದು. ಹೆಚ್ಚುಹೆಚ್ಚು ನಾಟಕಗಳನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಿದೆಎಂದು ತಿಳಿಸಿದರು.ಕನ್ನಡಸಾಹಿತ್ಯಪರಿಷತ್‌ಜಿಲ್ಲಾಧ್ಯಕ್ಷಕೆ.ಎಂ.ಶಿವಸ್ವಾಮಿಮಾತನಾಡಿ, ಶ್ರೇಷ್ಠ ಕವಿಗಳನ್ನು ನಾಟಕ, ಕಾವ್ಯಗಳಮೂಲಕ ನೋಡುವ ಸುವರ್ಣಾವಕಾಶ ಒದಗಿದೆ.ಆದ್ದರಿಂದ ನಾಲ್ಕು ದಿನಗಳ ಕಾಲ ನಡೆಯುವ ಕುವೆಂಪುನಾಟಕೋತ್ಸವದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ರಂಗಕಲಾವಿದರನ್ನು ಪ್ರೋತ್ಸಾಹಿಸಬೇಕು.ಕುವೆಂಪು ಅವರ ಎಲ್ಲಾಕೃತಿ, ನಾಟಕಗಳಲ್ಲಿ ಮಲೆನಾಡಿನಚಿತ್ರಣವಿದೆ. ನಮ್ಮ ಜಿಲ್ಲೆಯ ಟಿ.ಎಸ್‌. ವೆಂಕಣ್ಣಯ್ಯಕುವೆಂಪುರವರ ಗುರುಗಳಾಗಿದ್ದರು. ನಾಟಕಗಳನ್ನುನೋಡಿದರೆ ಜೀವನದಲ್ಲಿ ಪ್ರಭಾವ ಬೀರುತ್ತದೆ.

ಚಲನಚಿತ್ರಕ್ಕಿಂತ ನಾಟಕ ಮನಸ್ಸಿನ ಮೇಲೆ ಹೆಚ್ಚುಪರಿಣಾಮವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ| ಬಿ.ರಾಜಶೇಖರಪ್ಪ ಮಾತನಾಡಿ,ಕನ್ನಡ ಸಾಹಿತ್ಯಕ್ಕೆಕುವೆಂಪುದೊಡ್ಡ ಶಕ್ತಿ. ಕ್ರಾಂತಿಕಾರಿ ನಿಲುವು ವ್ಯಕ್ತಪಡಿಸುವ ಅವರನಾಟಕದಲ್ಲಿ ವಸ್ತು ಹಳೆಯದಾದರೂ ದೃಷ್ಟಿಕೋನ,ದರ್ಶನ ಹೊಸತನದಿಂದ ಕೂಡಿದೆ. ನವೀನ, ವೈಚಾರಿಕ,ವೈಜ್ಞಾನಿಕ ದೃಷ್ಟಿಕೋನ ನಾಟಕದಲ್ಲಿ ಸಮ್ಮಿಳಿತವಾಗಿದೆ.ಬಹಳ ಎತ್ತರದ ದೊಡ್ಡ ಕವಿಯಾಗಿದ್ದ ಕುವೆಂಪುನಾಟಕಗಳಿಗೆ ಪ್ರೇಕ್ಷಕರ ಮನಸ್ಸನ್ನು ಅರಳಿಸುವ ಶಕ್ತಿಯಿದೆಎಂದು ಅಭಿಪ್ರಾಯಿಸಿದರು.ಜಿಲ್ಲಾ ಕ®ಡ ‌° ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷಆರ್‌. ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯಪ್ಪ,ತೋಟಪ್ಪ ಉñಂಗಿ‌¤ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next