Advertisement

“ಪತ್ರಕರ್ತರ ನಡಿಗೆ ಬ್ರಹ್ಮಗಿರಿ ಬೆಟ್ಟದ ಕಡೆಗೆ”

03:31 PM Dec 26, 2021 | Team Udayavani |

ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ”ಪತ್ರಕರ್ತರ ನಡಿಗೆ ಬ್ರಹ್ಮಗಿರಿ ಬೆಟ್ಟದ ಕಡೆಗೆ’ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.ಜಿಲ್ಲೆಯಲ್ಲಿ ಪ್ರಾಗೆ„ತಿಹಾಸಿಕ ಸಂಗತಿಗಳನ್ನು ಹೊಂದಿರುವಮೊಳಕಾಲ್ಮೂರು ತಾಲ್ಲೂಕಿನ ಗುಡ್ಡಗಾಡು ಪ್ರದೇಶ ಹಾಗೂಐತಿಹಾಸಿಕ ಸ್ಥಳವಾದ ಅಶೋಕ ಸಿದ್ದಾಪುರದ ಬ್ರಹ್ಮಗಿರಿ ಬೆಟ್ಟದಲ್ಲಿಪತ್ರಕರ್ತರು ಸಂಚರಿಸಿದರು.

Advertisement

ಇದೇ ವೇಳೆ ಮೊಳಕಾಲ್ಮುರಿನಚಿಕ್ಕೋಬನಹಳ್ಳಿಯ ಕೀರ್ತಿ ಶಿಕ್ಷಣ ಮತ್ತು ಸಾಮಾಜಿಕ ಗ್ರಾಮೀಣಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಯೋಗದಲ್ಲಿ ಎಂ. ತ್ರಿವೇಣಿ ಮತ್ತು ತಂಡದವರು ಸುಗಮಸಂಗೀತ, ದೇಶಭಕ್ತಿ ಗೀತೆ ಹಾಗೂ ಲೋಕೇಶ್‌ ಪಲ್ಲವಿ ತಂಡದವರುಜನಪದ ಸಂಗೀತ ನಡೆಸಿಕೊಟ್ಟರು.ಸಿಂಹ ಘರ್ಜನೆ, ಶಂಖನಾದ ವಿಶೇಷ: ಮೌರ್ಯ ಸಾಮ್ರಜ್ಯದ ದಕ್ಷಿಣತುದಿ ಎಂದೇ ಖ್ಯಾತಿ ಪಡೆದಿರುವ ಅಶೋಕ ಸಿದ್ದಾಪುರ ಸಮೀಪದಬ್ರಹ್ಮಗಿರಿ ಬೆಟ್ಟದ ಸಿದ್ದೇಶ್ವರ ಮಠದ ಬಾಗಿಲು ತೆರೆಯುವಾಗಶಂಖನಾದ, ಮುಚ್ಚುವಾಗ ಸಿಂಹ ಘರ್ಜನೆ ಅಚ್ಚರಿ ಮೂಡಿಸಿತು.

ಬ್ರಹ್ಮಗಿರಿ ಬೆಟ್ಟದಲ್ಲಿನ ಅಕ್ಕ-ತಂಗಿ ದೇವಸ್ಥಾನಗಳು, ಬ್ರಹ್ಮಗಿರಿ ಬೆಟ್ಟ,ಬೆಟ್ಟದಲ್ಲಿರುವ ಅನೇಕ ಚಿಕ್ಕ ಚಿಕ್ಕ ದೇವಸ್ಥಾನಗಳು, ರಾಮಾಯಾಣದಐತಿಹ್ಯದ ರಾಮೇಶ್ವರ ದೇವಸ್ಥಾನ, ಜಟಾಯು ಪಕ್ಷಿ ಸಮಾಧಿ ,ಬೆಟ್ಟದ ತಪ್ಪಲಿನಲ್ಲಿರುವ ಜೈನ ಬಸದಿಗಳು ಗಮನ ಸೆಳೆದವು.ಈ ವೇಳೆ ಜಿಲ್ಲಾ ವಾರ್ತಾ ಧಿಕಾರಿ ಬಿ. ಧನಂಜಯ ಮಾತನಾಡಿ,ಮೊಳಕಾಲ್ಮೂರು ಪಟ್ಟಣ ಸೇರಿದಂತೆ ತಾಲೂಕು ಗುಡ್ಡಗಾಡುಪ್ರದೇಶ ಹಾಗೂ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ.

ಮೋಹಕಮತ್ತು ಗುಣಮಟ್ಟ ರೇಷ್ಮೆಸೀರೆ ತಯಾರಿಕೆಗೆ ಮೊಳಕಾಲ್ಮುರುತಾಲ್ಲೂಕು ಖ್ಯಾತಿ ಪಡೆದಿದೆ. ಇಲ್ಲಿ ಕೈಮಗ್ಗಗಳಿಂದ ತಯಾರಾಗುವರೇಷ್ಮೆ ಸೀರೆಗಳು ವಿದೇಶದಲ್ಲೂ ಖ್ಯಾತಿ ಪಡೆದುಕೊಂಡಿವೆ ಎಂದರು.ಚಿತ್ರದುರ್ಗದ ಪುರಾತನ ಪಟ್ಟಣವೆಂದೇ ಹೆಸರುವಾಸಿಯಾಗಿರುವಅಶೋಕ ಸಿದ್ದಾಪುರ ಬ್ರಹ್ಮಜಗಿರಿ ಬೆಟ್ಟ ಉತ್ತಮ ಪ್ರೇಕ್ಷಣೀಯಪ್ರವಾಸಿ ತಾಣವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮೊಳಕಾಲ್ಮೂರಿನಜಿ.ಎಸ್‌. ವಸಂತ ಮಾಸ್ಟರ್‌ ರಚಿಸಿರುವ “ತ್ರಿವಿಧ ದಾಸೋಹಿ ಶರಣಶ್ರೀ ಮಹದೇವಪ್ಪ ತಾತನವರು’ ಕೃತಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿ,ಮೊಳಕಾಲ್ಮೂರಿನ ಮುಖಂಡರಾದ ಚಂದ್ರಶೇಖರ್‌ ಗೌಡ,ಸಂಗೀತ ಶಿಕ್ಷಕ ಶಿವಣ್ಣ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾಶಾಖೆಯ ಕಾರ್ಯದರ್ಶಿ ಮಜಹರ್‌ ಉಲ್ಲಾ, ಖಜಾಂಚಿ ಅರುಣ್‌ಕುಮಾರ್‌ ಹಾಗೂ ಪತ್ರಕರ್ತರಾದ ಬಸವರಾಜ ಮುದನೂರು, ಶ.ಮಂಜುನಾಥ್‌, ಶ್ರೀನಿವಾಸ್‌, ಗೌನಹಳ್ಳಿ ಗೋವಿಂದಪ್ಪ, ಮಾಲತೇಶ್‌ಅರಸ್‌, ವೀರೇಂದ್ರ, ಎಸ್‌.ಟಿ. ನವೀನ್‌ಕುಮಾರ್‌, ಸುರೇಶಬಾಬು,ಕುಮಾರ್‌, ವೀರೇಶ್‌, ಎಸ್‌. ಚಂದ್ರಶೇಖರ್‌, ಎಚ್‌. ತಿಪ್ಪಯ್ಯ,ಎಂ.ಜೆ. ಬೋರೇಶ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next