ಚಿತ್ರದುರ್ಗ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆಕ್ರಮಬದ್ಧವಾಗಿರಲು ಪೊಲೀಸರ ಪಾತ್ರ ಬಹಳಮುಖ್ಯ ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.ಪೊಲೀಸ್ ಕವಾಯತು ಮೈದಾನದಲ್ಲಿಶುಕ್ರವಾರದಿಂದ ಮೂರು ದಿನಗಳ ಕಾಲನಡೆಯಲಿರುವ ಜಿಲ್ಲಾ ಪೊಲೀಸ್ ವಾರ್ಷಿಕಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದೆ.ಆದ್ದರಿಂದ ಪೊಲೀಸರು ಬೇರೆಯವರಿಗೆಮಾದರಿಯಾಗಿರಬೇಕು. ಪೊಲೀಸ್ ಧ್ವನಿಸಿಂಹ ಘರ್ಜನೆಯಿದ್ದಂತೆ. ಅದಕ್ಕಾಗಿ ಸಮಾಜಘಾತುಕರಿಗೆ ಲಾಠಿ ಸದ್ದು ಕೇಳಿಸಿದರೆ ಸಮಾಜಶಾಂತಿಯುತವಾಗಿರುತ್ತದೆ ಎಂದು ಹೇಳಿದರು.ಸದಾ ಒತ್ತಡದ ನಡುವೆ ಕೆಲಸ ಮಾಡುವಪೊಲೀಸರಿಗೆ ಕ್ರೀಡಾಕೂಟ ಅತ್ಯವಶ್ಯಕವಾಗಿ ಬೇಕು.ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಪೊಲೀಸರು ಸಲ್ಲಿಸಿದ ಸೇವೆ ಸ್ಮರಣೀಯ. ಕ್ರೀಡೆಯಲ್ಲಿಸೋಲು-ಗೆಲುವಿಗಿಂತ ಭಾಗವಹಿಸುವುದುಮುಖ್ಯ. ಒತ್ತಡದಿಂದ ಹೊರ ಬಂದು ಮಾನಸಿಕಮತ್ತು ದೈಹಿಕವಾಗಿ ಸದೃಢರಾಗಿಬೇಕಾದರೆ ಕ್ರೀಡೆಸಹಧಿಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಕ್ಷಣಾ ಧಿಕಾರಿಜಿ.ರಾಧಿ ಕಾ ಮಾತನಾಡಿ, ಕ್ರೀಡೆಯಿಂದಪರಸ್ಪರ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯನ್ನುಸೋಲು-ಗೆಲುವು ಎಂದು ಭಾವಿಸುವುದರ ಬದಲುಕ್ರೀಡಾ ಮನೋಭಾವದಿಂದ ಪ್ರತಿಯೊಬ್ಬರುಆಡಬೇಕು. ಮಾನಸಿಕ ಮತ್ತು ದೈಹಿಕ ಸದೃಢತೆಗೆಕ್ರೀಡೆ ಸಹಕಾರಿಯಾಗಲಿದೆ ಎಂದರು.ಯಾವುದೇ ಕಾರಣಕ್ಕೂ ಕ್ರೀಡೆಯಿಂದಪೊಲೀಸರು ದೂರ ಸರಿಯಬಾರದು. ಧ್ಯಾನಮತ್ತು ವ್ಯಾಯಾಮ ಇವುಗಳಿಗೂ ಕ್ರೀಡೆಯಷ್ಟೆಮಹತ್ವ ಕೊಡಬೇಕು. ಇದರಿಂದ ಒತ್ತಡದಿಂದಹೊರ ಬರಲು ಸಾಧ್ಯ ಎಂದು ಕ್ರೀಡೆಯ ಮಹತ್ವತಿಳಿಸಿದರು.
40 ವರ್ಷ ದಾಟಿದ ನಂತರ ರಕ್ತದೊತ್ತಡಮತ್ತು ಸಕ್ಕರೆ ಕಾಯಿಲೆ ಕಟ್ಟಿಟ್ಟ ಬುತ್ತಿಯಿದ್ದಂತೆ.ಬೆಂಗಳೂರಿನಲ್ಲಿ ಈಗ ಎಲ್ಲರೂ ದ್ವಿಚಕ್ರವಾಹನಗಳ ಬಳಕೆ ಕಡಿಮೆ ಮಾಡಿ ಸೈಕಲ್‌ನಲ್ಲಿಕೆಲಸ ಓಡಾಡುತ್ತಿದ್ದಾರೆ. ಇದರಿಂದ ಆರೋಗ್ಯವೃದ್ಧಿಯಾಗಲಿದೆ. ಆದ್ದರಿಂದ ಕ್ರೀಡೆಗೆ ಉತ್ತೇಜನಕೊಡಿ. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿನಮ್ಮ ಜಿಲ್ಲೆಯ ಪೊಲೀಸರು ಹಗ್ಗ ಜಗ್ಗಾಟದಲ್ಲಿಪ್ರಸಿದ್ದಿಯಾಗಿದ್ದಾರೆ. ಈ ಬಾರಿಯೂ ನಮ್ಮ ಜಿಲ್ಲೆಗೆಬಹುಮಾನ ಸಿಗಲಿ ಎಂದು ಹಾರೈಸಿದರು.
ಐಮಂಗಲ ಪೊಲೀಸ್ ತರಬೇತಿ ಶಾಲೆಯಪ್ರಾಚಾರ್ಯ ಪಾಪಣ್ಣ ವೇದಿಕೆಯಲ್ಲಿದ್ದರು.ಡಿವೈಎಸ್ಪಿ ಗಳಾದ ಪಾಂಡುರಂಗಪ್ಪ, ಜಮೀರ್,ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್‌ಅ ಧಿಕಾರಿಗಳು ಹಾಗೂ ನಿವೃತ್ತ ಅ ಧಿಕಾರಿಗಳುಇದ್ದರು.ಪ್ರವೀಣ್‌ಕುಮಾರ್ ಕ್ರೀಡಾ ಜ್ಯೋತಿ ಹೊತ್ತುತಂದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಇನ್ಸ್‌ಪೆಕ್ಟರ್ ರುದ್ರೇಶ್ ಕ್ರೀಡಾ ಪ್ರತಿಜ್ಞಾ ವಿಧಿಬೋ ಧಿಸಿದರು.