ಚಿತ್ರದುರ್ಗ: ಮತದಾರರ ಪಟ್ಟಿಗೆ 18 ವರ್ಷತುಂಬುವ ಯುವ ಮತದಾರರು ಸೇರುವಂತೆ ವಿಶೇಷಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿಕಾರ್ಯದರ್ಶಿ ಡಾ| ಪಿ.ಸಿ. ಜಾಫರ್ ತಿಳಿಸಿದರು.
ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರಅಧಿಕಾರಿಗಳ ಸಭೆ ನಡೆಸಿದ ಅವರು, ತಹಶೀಲ್ದಾರ್‌ಗಳು ಕನಿಷ್ಠ ಒಂದೆರಡು ಗ್ರಾಮಗಳಿಗೆ ಖುದ್ದು ಭೇಟಿನೀಡಿ ನೋಂದಣಿಯಾಗುವ ಮತದಾರರ ಅಂಕಿಅಂಶಗಳು, ದಾಖಲೆ ಪರಿಶೀಲನೆ ಮಾಡಬೇಕುಎಂದು ಸೂಚಿಸಿದರು.ನ್ಯಾಯಬೆಲೆ ಅಂಗಡಿಗಳಲ್ಲಿನ ಅಂಕಿ ಅಂಶ ಪಡೆದುಜನಸಂಖ್ಯೆ ಎಷ್ಟಿದೆ, ಇದರಲ್ಲಿ ಯುವ ಮತದಾರರುಎಷ್ಟಿದ್ದಾರೆ ಹಾಗೂ ಮತದಾರರ ಪಟ್ಟಿಗೆ ಎಷ್ಟು ಜನನೊಂದಾಯಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕು.
ಪ್ರಸ್ತಾವಿತ ಜನಸಂಖ್ಯೆಗೆ ಅನುಗುಣವಾಗಿ 2022ಕ್ಕೆ18ರಿಂದ 19ರೊಳಗಿನ ಜನಸಂಖ್ಯೆ 48,469ಇರಬೇಕಾಗಿದೆ. ಈಗಾಗಲೇ ಇದರಲ್ಲಿ 10,996ಯುವ ಮತದಾರರು ಸೇರಿರುವುದು ಹಾಗೂನೊಂದಣಿಗೆ 9854 ಸೇರಿದಂತೆ ಒಟ್ಟು 20,850ಮತದಾರರು ಸೇರ್ಪಡೆಯಾಗಿದ್ದಾರೆ. ಪ್ರಸ್ತಾವಿತಜನಸಂಖ್ಯೆಗನುಗುಣವಾಗಿ ಪರಿಶೀಲನೆ ನಡೆಸಿಖಾತ್ರಿಪಡಿಸಿಕೊಳ್ಳಬೇಕು.
ಹಾಗಾಗಿ ಜಿಲ್ಲೆಯಎಲ್ಲ ತಹಶೀಲ್ದಾರ್‌ಗಳು ಕನಿಷ್ಠ ಒಂದು ಅಥವಾಎರಡು ಗ್ರಾಮಗಳಿಗೆ ಭೇಟಿ ನೀಡಿ ಜನಸಂಖ್ಯೆಗೆಅನುಗುಣವಾಗಿ ದಾಖಲೆ ಪರಿಶೀಲಿಸಬೇಕು ಎಂದುಹೇಳಿದರು.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿಮಾತನಾಡಿ, ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ1648 ಮತಗಟ್ಟೆಗಳಿವೆ. 6,90,407 ಪುರುಷ,6,85,480 ಮಹಿಳಾ ಮತದಾರರು ಹಾಗೂ 77 ಇತರೆಮತದಾರರು ಸೇರಿ ಜಿಲ್ಲೆಯಲ್ಲಿ ಒಟ್ಟು 13,75,964ಮತದಾರರಿದ್ದಾರೆ.
ನವೆಂಬರ್ 8 ರಿಂದ ಡಿಸೆಂಬರ್8ರವರೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಒಟ್ಟು30,672 ಅರ್ಜಿಗಳು ಸ್ವೀಕೃತವಾಗಿವೆ. ಅರ್ಜಿನಮೂನೆ 6ಕ್ಕೆ ಸಂಬಂಧಿಸಿದಂತೆ 16,664 ಅರ್ಜಿಗಳುಸ್ವೀಕೃತವಾಗಿದ್ದು, ಇದರಲ್ಲಿ 946 ಅರ್ಜಿಗಳುತಿರಸ್ಕೃತಗೊಂಡಿವೆ. ಅರ್ಜಿ ನಮೂನೆ 6ಎನಲ್ಲಿಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ.
ಅರ್ಜಿನಮೂನೆ 7ಕ್ಕೆ ಸಂಬಂಧಿಸಿದಂತೆ 9,149 ಅರ್ಜಿಗಳುಸ್ವೀಕೃತವಾಗಿದ್ದು, 217 ಅರ್ಜಿಗಳು ತಿರಸ್ಕೃತವಾಗಿವೆ.ನಮೂನೆ 8ಕ್ಕೆ 4305 ಅರ್ಜಿಗಳು ಸ್ವೀಕೃತವಾಗಿದ್ದು,196 ಅರ್ಜಿಗಳು ತಿರಸ್ಕೃತಗೊಂಡಿವೆ ಹಾಗೂ ಅರ್ಜಿನಮೂನೆ 8ಎಕ್ಕೆ ಸಂಬಂಧಿಸಿದಂತೆ 574 ಅರ್ಜಿಗಳುಸ್ವೀಕೃತವಾಗಿದ್ದು, 114 ಅರ್ಜಿಗಳು ತಿರಸ್ಕೃತಗೊಂಡಿವೆಎಂದು ಮಾಹಿತಿ ನೀಡಿದರು.