Advertisement

ಒಂದೇ ಗಿಡದಲ್ಲಿ 100ಕ್ಕೂಹೆಚ್ಚು ಶೇಂಗಾ ಕಾಯಿ!

01:57 PM Sep 22, 2021 | Team Udayavani |

ಚಳ್ಳಕೆರೆ: ಪ್ರಸ್ತುತ ವರ್ಷ ಬಹುತೇಕ ಎಲ್ಲಾಬೆಳೆಗಳು ನೆಲ ಕಚ್ಚಿವೆ. ಶೇಂಗಾಕ್ಕೆ ಬೆಂಕಿರೋಗ ವ್ಯಾಪಿಸಿದೆ. ಈರುಳ್ಳಿ ಬೆಳೆಯೂಕೊಳೆ ಮತ್ತು ಶಿಲೀಂಧ್ರ ರೋಗದಿಂದ ಬಳಲುತ್ತಿವೆ.
ಇಂತಹ ಸಂದರ್ಭದಲ್ಲಿರೈತನೊಬ್ಬ ಕಡಿಮೆ ಪ್ರದೇಶದಹೊಲದಲ್ಲಿ ಶೇಂಗಾ ಬೆಳೆ ಬೆಳೆಯುವಮೂಲಕ ಅಚ್ಚರಿ ಮೂಡಿಸಿದ್ದಾನೆ.ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದನಾರಾಯಣ ರೆಡ್ಡಿ ಎಂಬುವವರ ಪುತ್ರ ಮುಸಲಪ್ಪ ರೆಡ್ಡಿ ತನ್ನ ಒಂದುಎಕರೆ ಜಮೀನಿನಲ್ಲಿ ಕೇವಲ 20 ಶೇರುಶೇಂಗಾ ಬೀಜ ಬಿತ್ತನೆ ಮಾಡಿದ್ದರು.ಕಾಲ ಕಾಲಕ್ಕೆ ಸರಿಯಾಗಿ ಬೆಳೆಬೆಳೆಯಲು ಅವಶ್ಯವಿರುವ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳನ್ನುಪೂರ್ಣಗೊಳಿಸಿದ್ದರು.

Advertisement

ಮಂಗಳವಾರಗಿಡ ಕಿತ್ತು ನೋಡಿದಾಗ ಒಂದುಗಿಡದಲ್ಲಿ ಸುಮಾರು 100ಕ್ಕೂ ಹೆಚ್ಚುಫಲವತ್ತಾದ ಶೇಂಗಾ ಕಾಯಿಗಳುಬಂದಿವೆ. ಸುತ್ತಮುತ್ತಲಿನ ರೈತರೂಸಹ ಒಂದೇ ಗಿಡದಲ್ಲಿ ಈ ಪ್ರಮಾಣದಕಾಯಿ ಬಿಟ್ಟಿದ್ದು ಕಂಡಿರಲಿಲ್ಲವೆಂದುಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಶೇಂಗಾ ಇಳುವರಿಯಲ್ಲಿ ರೈತರುಜಾಗ್ರತೆ ವಹಿಸಿದರೆ ಮಾತ್ರ ಹೆಚ್ಚಿನಬೆಳೆ ಬೆಳೆದು ಲಾಭ ಪಡೆಯಲುಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತ ಮುಸಲಪ್ಪ ಹೆಚ್ಚಿನ ಸಮಯವನ್ನು ಜಮೀನಲ್ಲೇ ಇದ್ದು ಬೆಳೆಯ ಬಗ್ಗೆ ನಿಗಾವಹಿಸುತ್ತಿದ್ದರು. ಇದು ಇಳುವರಿ ಅಧಿಕವಾಗಲು ಕಾರಣವೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next