Advertisement

ಜ.1ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ

05:10 PM Dec 18, 2021 | Team Udayavani |

ಚಿತ್ರದುರ್ಗ: 2021-22ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 1ರಿಂದಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲಾಗುತ್ತದೆಎಂದು ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

Advertisement

ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ 2021-22ನೇ ಸಾಲಿನ ಕನಿಷ್ಟ ಬೆಂಬಲ ಬೆಲೆಯೋಜನೆ ಕಾರ್ಯಾಚರಣೆ ಜಿಲ್ಲಾ ಟಾಸ್ಕ್ ಪೋರ್ಸ್‌ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಗಿಯನ್ನು ಪ್ರತಿ ಕ್ವಿಂಟಾಲ್‌ಗೆ 3377 ರೂ.ಗಳ ಬೆಂಬಲ ಬೆಲೆಯನ್ನು ನಿಗ ದಿಮಾಡಲಾಗಿದೆಮತ್ತು 50 ಕೆ.ಜಿ ತೂಕವುಳ್ಳ ಗೋಣಿ ಚೀಲದವೆಚ್ಚವಾಗಿ 22 ರೂ.ಗಳಂತೆ ನೀಡಲಾಗುತ್ತದೆ.ಇದರ ನೋಂದಣಿಗೆ ಪ್ರೂಟ್ಸ್‌ ದತ್ತಾಂಶದಂತೆ ಇದರನೋಂದಣಿ ಮಾಡಲಾಗುತ್ತದೆ.

ರೈತರು 2022ರಜನವರಿ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿಖರೀದಿಗೆ ನೋಂದಾಯಿಸಿಕೊಳ್ಳಬೇಕು. ರಾಗಿಖರೀದಿಗೆ ಚಿತ್ರದುರ್ಗದ ಎಪಿಎಂಸಿ, ಹೊಳಲ್ಕೆರೆತಾಲೂಕು ಚಿಕ್ಕಜಾಜೂರು ಎಪಿಎಂಸಿಯಲ್ಲಿತಲಾ ಒಂದು ಖರೀದಿ, ಹೊಸದುರ್ಗ ಎಪಿಎಂಸಿಆವರಣದಲ್ಲಿ ನಾಲ್ಕು ಹೋಬಳಿಗಳಿಂದ ಎರಡುಹೋಬಳಿಗೊಂದರಂತೆ ಎರಡು ಖರೀದಿಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದುಹೇಳಿದರು.

ಜಿಲ್ಲೆಯ ಚಿತ್ರದುರ್ಗ 2204, ಚಳ್ಳಕೆರೆ518, ಹಿರಿಯೂರು 2763, ಹೊಳಲ್ಕೆರೆ 4429,ಹೊಸದುರ್ಗ 33,531 ಹಾಗೂ ಮೊಳಕಾಲ್ಮುರುತಾಲೂಕಿನಲ್ಲಿ 332 ಹೆಕ್ಟೇರ್‌ ಸೇರಿದಂತೆ ಒಟ್ಟುಜಿಲ್ಲೆಯಲ್ಲಿ 43777 ಹೆಕ್ಟೇರ್‌ ರಾಗಿ ಬಿತ್ತನೆಯಾಗಿದ್ದು,ಇದರಿಂದ 32559 ಮೆಟ್ರಿಕ್‌ ಟನ್‌ ರಾಗಿಉತ್ಪಾದನೆಯ ಗುರಿ ಹೊಂದಲಾಗಿದೆ ಎಂದರು.

ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿಎಕೆರೆಗೆ 10 ಕ್ವಿಂಟಲ್‌ನಂತೆ ಗರಿಷ್ಟ 20 ಕ್ವಿಂಟಾಲ್‌ರಾಗಿಯನ್ನು ಖರೀಸಲಾಗುತ್ತದೆ. ರಾಗಿ ಖರೀದಿಕೇಂದ್ರಕ್ಕೆ ತರುವಾಗ ಎಫ್‌ಎಕ್ಯೂ ಗುಣಮಟ್ಟವನ್ನುಕಡ್ಡಾಯವಾಗಿ ಹೊಂದಿರಬೇಕು ಎಂದ ಅವರು,ರಾಗಿ ಖರೀದಿಯನ್ನು ಕರ್ನಾಟಕ ಆಹಾರ ಮತ್ತುನಾಗರಿಕ ಸರಬರಾಜು ನಿಗಮದ ಮೂಲಕರೈತರಿಂದ ಖರೀದಿಸಲು ಏಜೆನ್ಸಿಯಾಗಿ ನೇಮಕಮಾಡಲಾಗಿರುತ್ತದೆ. ಕೃಷಿ ಇಲಾಖೆಯಿಂದ ಪ್ರತಿಖರೀದಿ ಕೇಂದ್ರಗಳಲ್ಲಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಬೇಕು ಮತ್ತು ಸಂಗ್ರಹಣೆಗೆ ಅಗತ್ಯಗೋದಾಮುಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲುಸೂಚನೆ ನೀಡಿದರು.

Advertisement

ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜುಇಲಾಖೆ ಜಂಟಿ ನಿರ್ದೇಶಕ ಶಿವಣ್ಣ, ಕೃಷಿ ಇಲಾಖೆಜಂಟಿ ಕೃಷಿ ನಿರ್ದೇಶಕ ಡಾ| ಪಿ.ರಮೇಶಕುಮಾರ್‌,ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್‌ ಸೇರಿದಂತೆ ವಿವಿಧಇಲಾಖೆಯ ಜಿಲ್ಲಾಮಟ್ಟದ ಅ ಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next